ಯಾದಗಿರಿ : ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪ ಮೇಲೆ ಮುಖ್ಯ ಶಿಕ್ಷಕನನ್ನು ಯಾದಗಿರಿ ಸಿಇಓ ಅಮಾನತ್ತು ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರದಲ್ಲಿ ಘಟನೆ ನಡೆದಿದೆ.
ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಮುಖ್ಯ ಶಿಕ್ಷಕ ಹಣಮೇಗೌಡ ಎಂಬಾತನನ್ನು ಸಿಇಓ ಗರೀಮಾ ಪನ್ವಾರ್ ರಿಂದ ಅಮಾನತ್ತು ಮಾಡಿದ್ದಾರೆ. ಶಿಕ್ಷಕ ಹಣಮೇಗೌಡ ಹತ್ತನೇ ತರಗತಿ ವಿದ್ಯಾರ್ಥಿನಿಯರ ಜೊತೆ ಅನಿಚಿತವಾಗಿ ನಡೆದುಕೊಳ್ತಿದ್ದ ಎನ್ನಲಾಗ್ತಿದ್ದು, ಶಿಕ್ಷಕನ ಅನುಚಿತ ವರ್ತನೆಗೆ ಬೇಸತ್ತು ಪೋಷಕರ ಬಳಿ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡು ಪೋಷಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.
ಪೋಷಕರ ದೂರಿನನ್ವಯ ಶಾಲೆಗೆ ಭೇಟಿ ಮಕ್ಕಳಿಂದ ಮಾಹಿತಿ ಪಡೆದಿದ್ದ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರ ಹೇಳಿಕೆಯ ಆಧಾರದ ಮೇಲೆ ಮುಖ್ಯ ಶಿಕ್ಷಕನನ್ನ ಸಿಇಓ ಗರೀಮಾ ಪನ್ವಾರ್ ಅಮಾನತ್ತು ಮಾಡಿ ಆದೇಶಿಸಿದ್ದಾರೆ.