Wednesday, January 28, 2026
27.8 C
Bengaluru
Google search engine
LIVE
ಮನೆ#Exclusive Newsಮಾಕ್ ಡ್ರಿಲ್ ಅಂದ್ರೆ ಕ್ರಿಕೆಟ್ ಮ್ಯಾಚ್​ ಗೆ ಮುನ್ನ ಪ್ರಾಕ್ಟೀಸ್ ಇದ್ದಂತೆ - ನಿವೃತ್ತ ಸೇನಾನಿ...

ಮಾಕ್ ಡ್ರಿಲ್ ಅಂದ್ರೆ ಕ್ರಿಕೆಟ್ ಮ್ಯಾಚ್​ ಗೆ ಮುನ್ನ ಪ್ರಾಕ್ಟೀಸ್ ಇದ್ದಂತೆ – ನಿವೃತ್ತ ಸೇನಾನಿ ಎಸ್​ಎಂ ತಳವಾರ್​

ಮಾಕ್ ಡ್ರಿಲ್ ಅಂದ್ರೆ ಏನು ಅನ್ನೋದನ್ನು ತುಂಬಾನೆ ಸಿಂಪಲ್ ಆಗಿ, ಎಲ್ಲರಿಗೂ ಅರ್ಥ ಆಗುವಂತೆ ವಿವರಿಸಿದ್ದಾರೆ ವಾಯುಪಡೆಯ ನಿವೃತ್ತ ಅಧಿಕಾರಿ ಎಸ್​ ಎಂ ತಲವಾರ್.

1964ರಲ್ಲಿ ಏರ್ ಫೋರ್ಸ್‌ಗೆ ಸೇರಿದ ಎಸ್ ಎಮ್ ತಲವಾರ್ ಅವರು 1979ರಲ್ಲಿ ನಿವೃತ್ತರಾದರು. 1971ರ ಭಾರತ-ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ರು. ಇಂತಹ ಅನುಭವಿ ಸೇನಾನಿ ಜೊತೆ ಫ್ರೀಡಂಟಿವಿಯ ಹುಬ್ಬಳ್ಳಿ ವರದಿಗಾರ ಮಂಜುನಾಥ್ ಮಾಡಿರುವ ಎಕ್ಸ್​ ಕ್ಲೂಸೀವ್ ಚಿಟ್ ಚಾಟ್ ಮಾಡಿದ್ದಾರೆ

ಎಸ್ ಎಮ್ ತಲವಾರ್ ಅವರ ಪ್ರಕಾರ ಮಾಕ್ ಡ್ರಿಲ್ ಅಂದ್ರೆ ಯುದ್ಧಕ್ಕೆ ಸಿದ್ಧ ಎಂಬ ಸಂದೇಶ. ಇದನ್ನು ಒಂದು ಕ್ರಿಕೆಟ್ ಮ್ಯಾಚ್‌ ನಡೆಯುವ ಮುನ್ನ ನಡೆಯುವ ಪ್ರ್ಯಾಕ್ಟೀಸ್ ಮ್ಯಾಚ್ ಜೊತೆಗೆ ಹೋಲಿಕೆ ಮಾಡಬಹುದು.

ಮಾಕ್ ಡ್ರಿಲ್ ಜತೆಗೆ ಬ್ಲ್ಯಾಕ್ ಔಟ್ ಮಾಡ್ತಾರೆ. ಬ್ಲ್ಯಾಕ್ ಔಟ್ ಅಂದ್ರೆ ಜನ ಪ್ರಾಣ ರಕ್ಷಣೆ ಮಾಡಲು ಅನುಸರಿಸುವ ವಿಧಾನ. ಏರ್ ಪೋರ್ಸ್ ದಾಳಿ ಮೂಲಕ‌ ಆಗುವ ಹಾನಿ‌ ತಡೆಗಟ್ಟಲು ಬ್ಲ್ಯಾಕ್ ಔಟ್ ಮಾಡಲಾಗುತ್ತದೆ. ಯುದ್ಧ ಸೈರನ್ ಕೇಳಿದಾಗ ಲೈಟ್ ಆಫ್ ಮಾಡಲು ಜನಕ್ಕೆ ಸೂಚನೆ ನೀಡಲಾಗುತ್ತದೆ. ಜನ ಪ್ರಾಣದ ಹಾನಿ ಜೊತೆಗೆ ಸಂಪತ್ತು ಹಾನಿ‌ ತಡೆಗಟ್ಟುವುದೇ ಮಾಕ್ ಡ್ರಿಲ್ ಮತ್ತು ಬ್ಲ್ಯಾಕ್ ಔಟ್ ನ ಉದ್ದೇಶವಾಗಿರುತ್ತೆ.

1971ರ ಯುದ್ಧ ಸಂದರ್ಭದಲ್ಲಿ ಮಾಕ್ ಡ್ರಿಲ್‌ ಮಾಡಲಾಗುತ್ತಿತ್ತು. ಅಂದು ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಲೈಟ್ ಆಫ್ ಮಾಡಿ ಬ್ಲ್ಯಾಕ್ ಔಟ್ ಮಾಡುತ್ತಿದ್ರು ಎಂಬುದನ್ನು ನಿವೃತ್ತ ಸೇನಾನಿ ಎಸ್ ಎಂ ತಲವಾರ್ ನೆನಪಿಸಿಕೊಳ್ಳುತ್ತಾರೆ.

ಯುದ್ಧ ಘೋಷಣೆ ಅಷ್ಟು ಸುಲಭವಲ್ಲ. ಅದಕ್ಕೆ ಅದರದ್ದೇ ಆದ ಸಿದ್ಧತೆ ಬೇಕಾಗುತ್ತದೆ. ಭಾರತ ಸರ್ಕಾರ ಯುದ್ಧದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಯುದ್ಧ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಭಾರತ ಸರ್ಕಾರ ಅಥವಾ ಮಿಲಿಟರಿ ನೀಡುವ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಎಸ್​​ಎಂ ತಲವಾರ್ ಅಭಿಪ್ರಾಯಪಟ್ಟಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments