Top Newsಜಿಲ್ಲೆ

ಸುಧಾಕರ್​-ಪ್ರದೀಪ್ ಈಶ್ವರ್​ ರಾಜಕೀಯ ಆಟ.. ಕರಗ್ತಿವೆ ಬೆಟ್ಟಗುಡ್ಡ

ಚಿಕ್ಕಬಳ್ಳಾಪುರದಲ್ಲಿ ಕಲ್ಲುಕ್ವಾರಿ ಪಾಲಿಟಿಕ್ಸ್ ಜೋರಾಗಿದೆ. ರೈತನಿಗೆ ಗುಂಡಿಟ್ಟ ಪ್ರಕರಣ ಸಂಬಂಧ ರಾಜಕೀಯ ಕೆಸರೆರಚಾಟ ಜೋರಾಗಿದೆ.

ಕಳೆದ ವಾರ ರೈತನ ಮೇಲೆ ಗುಂಡು ಹಾರಿಸಿದ್ದ ಉದ್ಯಮಿ ಸಕಲೇಶ್ ಗೆ ನ ನಿಜಕ್ಕೂ ​ ಕಲ್ಲುಕ್ವಾರಿಗೆ ಪರವಾನಗಿ ಕೊಡಿಸಿದ್ಯಾರು? ಮಾಜಿ ಮಂತ್ರಿ, ಹಾಲಿ ಶಾಸಕ ಸುಧಾಕರ್​ ಅವರಾ? ಚಿಕ್ಕಬಳ್ಳಾಪುರದ ಹಾಲಿ ಶಾಸಕ ಪ್ರದೀಪ್ ಈಶ್ವರ್​ ಅವರಾ? ಕಲ್ಲು ಕ್ಚಾರಿಗೆ ಸಂಸದ ಸುಧಾಕರ್ ಪರ್ಮೀಷನ್ ಕೊಡಿಸಿದ್ರಾ? ಮುಂದುವರಿಕೆಗೆ ಶಾಸಕ ಪ್ರದೀಪ್​ ಈಶ್ವರ್​ ಗ್ರೀನ್ ಸಿಗ್ನಲ್ ಕೊಟ್ರಾ ಎಂಬ ಪ್ರಶ್ನೆ ಎದ್ದಿದೆ.

ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ. ಸುಧಾಕರ್ ಮೇಲೆ ಪ್ರದೀಪ್ ಈಶ್ವರ್​.. ಪ್ರದೀಪ್ ಈಶ್ವರ್ ಮೇಲೆ ಸುಧಾಕರ್ ಆರೋಪ ಮಾಡಿಕೊಳ್ತಿದ್ದಾರೆ..

ಅವರ-ಇವರ ರಾಜಕೀಯದಲ್ಲಿ ಚಿಕ್ಕಬಳ್ಳಾಪುರದ ಮಂದಿ ಬಡವಾಗ್ತಿದ್ದಾರೆ. ಸುಧಾಕರ್ -ಪ್ರದೀಪ್ ಈಶ್ವರ್ ರಾಜಕೀಯಕ್ಕೆ ಬೆಟ್ಟಗುಡ್ಡಗಳು ಕರಗ್ತಿವೆ. ಹೀಗಾಗಿ ಸಂಸದ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ರೈತರು ಸಿಟ್ಟು ಹೊರಹಾಕ್ತಿದ್ದಾರೆ.

ಆ ಪಕ್ಷದಲ್ಲಿ ಇರೋರು ಈ ಪಕ್ಷಕ್ಕೆ..ಈ ಪಕ್ಷದಲ್ಲಿ ಇರೋರು ಆ ಪಕ್ಷಕ್ಕೆ ಸಪೋರ್ಟ್ ಮಾಡ್ತಾರೆ.. ಪ್ರದೀಪ್ ಈಶ್ವರ್​ ಎಂಎಲ್​​ಎ ಆದ ಹೊಸತರಲ್ಲಿ ನಿಲ್ಲಿಸಿದ್ರು .. ಬಳಿಕ ಮತ್ತೆ ಸ್ಟಾರ್ಟ್ ಆಗಿದೆ.. ಯಾವುದೂ ಕಾನೂನು ಬದ್ಧವಾಗಿ ನಡೀತಿಲ್ಲ.. ಅಧಿಕಾರಿಗಳಿಗೆ ಲಂಚ ಕೊಡುತ್ತಿದ್ದಾರೆ.. ಕಂಪ್ಲೇಂಟ್ ಕೊಟ್ಟರೂ ತೆಗೆದು ಎಸೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

Comments (0)

Your email address will not be published. Required fields are marked *

Back to top button