ಕೋಲಾರ : ಏಕಕಾಲಕ್ಕೆ ಬಿಜೆಪಿ,ಜೆಡಿಎಸ್ ನಾಯಕರನ್ನು ಕಾಂಗ್ರೆಸ್ಗೆ ಕರೆತಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಬಂಗಾರಪೇಟೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ. ಮುನಿರಾಜು ಹಾಗೂ 2 ಬಾರಿ ಕೌನ್ಸಿಲರ್ ಆಗಿರುವ ಬಿಜೆಪಿಯ ಪ್ರಭಾವಿ ನಾಯಕ ಕೆ. ಚಂದ್ರಾರೆಡ್ಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನೇತೃತ್ವದಲ್ಲಿ ‘ಕೈ’ಹಿಡಿದಿದ್ದಾರೆ.
ಈ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಲಿದ್ದಾರೆ.