Tuesday, April 29, 2025
29.1 C
Bengaluru
LIVE
ಮನೆ#Exclusive NewsTop Newsಬಿಬಿಎಂಪಿ ಬಜೆಟ್ ಡೇಟ್ ಫಿಕ್ಸ್..!

ಬಿಬಿಎಂಪಿ ಬಜೆಟ್ ಡೇಟ್ ಫಿಕ್ಸ್..!

2025-26 ಸಾಲಿನ ಬಜೆಟ್​ ಮಂಡನೆಗೆ ಬಿಬಿಎಂಪಿ ಸಜ್ಜಾಗಿದೆ..ಬಿಬಿಎಂಪಿಯಲ್ಲಿ ಜನನಾಯಕರಿಲ್ಲದೆ ಈ ಬಾರಿಯೂ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಲಿದ್ದಾರೆ..ರಾಜಧಾನಿಯನ್ನು ತೀವ್ರವಾಗಿ ಬಾಧಿಸುತ್ತಿರುವ ಸಂಚಾರ ದಟ್ಟಣೆ, ಕಸ, ರಸ್ತೆ ಗುಂಡಿ ಸಮಸ್ಯೆ ನಿವಾರಣೆಗೆ  ಈ ಬಜೆಟ್​ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೂ ಅನುದಾನ ಒದಗಿಸುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುತ್ತಿದ್ದ 3 ಸಾವಿರ ಕೋಟಿ ರೂ. ಅನುದಾನವನ್ನು 7 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಬಿಬಿಎಂಪಿಯ 2025-26 ನೇ ಸಾಲಿನ ಬಜೆಟನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ತಾ. ಕೆ.ಹರೀಶ್ ಕುಮಾರ್ ಅವರು ಮಾರ್ಚ್ 28 ರಂದು ಮಂಡಿಸಲಿದ್ದಾರೆ. ಈ ಸಲ ಬಜೆಟ್ ಗಾತ್ರವು 19 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಗಳಿವೆ.

ನಗರದ ಪುರಭವನದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ದಾಖಲೆ ವೆಚ್ಚದ ಆಯವ್ಯಯವನ್ನು ಮಂಡನೆ ಮಾಡಲಾಗುತ್ತಿದೆ. ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭರಪೂರ ಅನುದಾನ ಒದಗಿಸಿದೆ. ರಾಜ್ಯದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಮೂಲಸೌಲಭ್ಯಗಳ ಅಭಿವೃದ್ಧಿಗೆ ಪ್ರತಿ ವರ್ಷ ನೀಡುತ್ತಿದ್ದ 3 ಸಾವಿರ ಕೋಟಿ ರೂ. ಅನುದಾನವನ್ನು 7 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.ರಾಜ್ಯ, ಕೇಂದ್ರ ಸರಕಾರದ ಅನುದಾನ ಹಾಗೂ ಸ್ವಂತ ಸಂಪನ್ಮೂಲವನ್ನು ನೆಚ್ಚಿಕೊಂಡು 19 ಸಾವಿರ ಕೋಟಿಗಿಂತ ಹೆಚ್ಚು ವೆಚ್ಚದ ಮುಂಗಡಪತ್ರ ಮಂಡಿಸಲು ಬಿಡಿಎಂಪಿ ತಯಾರಿ ಮಾಡಿಕೊಂಡಿದೆ.

ಮಹತ್ವಾಕಾಂಕ್ಷಿ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ 19 ಸಾವಿರ ರೂ.ಗಳ ಗ್ಯಾರಂಟಿಯ ಖಾತ್ರಿಯನ್ನು ಸರಕಾರ ಒದಗಿಸಿದೆ. ಉತ್ತರ-ದಕ್ಷಿಣ ಕಾರಿಡಾರ್‌ನ ವಿಸ್ತ್ರತ ಯೋಜನಾ ವರದಿ ಸಿದ್ಧವಾಗಿದ್ದು, ಟೆಂಡರ್ ಕರೆಯುವುದಷ್ಟೇ ಬಾಕಿ ಇದೆ.

ರಾಜಧಾನಿಯನ್ನು ತೀವ್ರವಾಗಿ ಬಾಧಿಸುತ್ತಿರುವ ಸಂಚಾರ ದಟ್ಟಣೆ, ಕಸ, ರಸ್ತೆ ಗುಂಡಿ ಸಮಸ್ಯೆ ನಿವಾರಣೆಗೆ 2025-26 ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿವೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೂ ಅನುದಾನ ಒದಗಿಸುವ ನಿರೀಕ್ಷೆ ಇದೆ. ಈಗಾಗಲೇ ಸರಕಾರ ಪ್ರವಾಹ ನಿಯಂತ್ರಣಕ್ಕೆ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್‌ಟಿಪಿಗಳನ್ನುನಿರ್ಮಿಸಲು ಬಿಬಿಎಂಪಿ, ಜಲಮಂಡಳಿಗೆ 3 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments