Thursday, August 21, 2025
26.4 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಹುಬ್ಬಳ್ಳಿಯಲ್ಲಿ 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿಯಲ್ಲಿ 5 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಇಡೀಯ ಮನುಕುಲವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಜ್ಯೂಸ್ ಕೋಡಿಸುವುದಾಗಿ ಚಿಕ್ಕಮಗುವನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸೆಗಿರುವ ಅಮಾನುಷ ಘಟನೆ ನಡೆದಿದೆ.

ಕಳೆದ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿಯ ಮಾರುತಿ ನಗರದ ಸಿರಾಜ್(55) ಎಂಬ ವ್ಯಕ್ತಿ 5 ವರ್ಷದ ಶ್ರೀನಾಥ ಎನ್ನುವ ಚಿಕ್ಕ ಮಗುವಿನ ಮೇಲೆ ಚೌಹಾನ್ ಲೇಔಟ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಈ ವೇಳೆ ಮಗು ವಿರೋಧ ವ್ಯಕ್ತಪಡಿಸಿದಾಗ ಮಗುವಿನ ಕಿರುಕುಳ ಕೊಟ್ಟು ಹಲ್ಲೇ ನಡೆಸಿದ್ದಾನೆ. ಈ ವೇಳೆ ಮಗುವಿನ ಆಕ್ರಂದನ ಕೇಳಿ ಕುಟುಂಬಸ್ಥರು ಧಾವಿಸಿ, ಮಗುವನ್ನು ರಕ್ಷಿಸಿದ್ದಾರೆ. ಪಾಪಿಯ ಹ್ಯೇಯ ಕೃತ್ಯದಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆ ಸಂಬಂಧ ಹುಬ್ಬಳ್ಳಿ ಸ್ಟೇಷನ್​ಗೆ ದೂರು ಕೊಡಲು ಹೊದ್ರು, ಕಂಪ್ಲೇಂಟ್​ ದಾಖಲಿಸಿಕೊಳ್ಳದೆ ಪೋಲಿಸರು ನಿರ್ಲಕ್ಷ್ಯವಹಿಸಿದ್ದಾರೆ. ಈ ಸುದ್ದಿ ತಿಳಿದ ಬಳಿಕ ಜೈ ಭೀಮ್ ಯುವ ಸಂಘಟನೆ ಮಗುವಿನ ಕುಟುಂಬಸ್ಥರ ಬೆನ್ನಿಗೆ ನಿಂತಿದೆ.

ಕಿಮ್ಸ್​ ಆಸ್ಪತ್ರೆಗೆ ಹಳೇ ಹುಬ್ಬಳ್ಳಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ವೇಳೆ ಮಗುವಿನ ತಾಯಿ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments