Friday, September 12, 2025
25 C
Bengaluru
Google search engine
LIVE
ಮನೆ#Exclusive NewsTop Newsಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ; ಪಾಕ್ ಪರ ಬರಹ ಪತ್ತೆ

ಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ; ಪಾಕ್ ಪರ ಬರಹ ಪತ್ತೆ

ರಾಮನಗರ: ಟೊಯೋಟಾ ಬೊಶೊಕು ಆಟೋಮೇಟಿವ್ ಇಂಡಿಯಾ ಕಂಪನಿಯಲ್ಲಿ ಯಾರೋ ಕಿಡಿಗೇಡಿಗಳು ದೇಶದ್ರೋಹದ ಕೃತ್ಯ ಎಸಗಿದ್ದಾರೆ.

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ” ಪಾಕಿಸ್ತಾನಕಿ ಜೈ” ಎಂದು ಈ ಕಂಪನಿಯ ಶೌಚಾಲಯದಲ್ಲಿ ಬರೆಯಲಾಗಿದೆ. ಅಲ್ಲದೆ “ಕನ್ನಡಿಗರು ಸೂ..ಮಕ್ಕಳು” ಎಂದು ಬರಹ ಇದೆ. ಆದರೆ ಯಾರು, ಯಾವಾಗ ಬರೆದು ಎಂಬ ಸ್ಪಷ್ಟನೆ ಇಲ್ಲ.

ಬಿಡದಿಯ ಟೊಯೋಟಾ ಬುಶೋಕುನಲ್ಲಿ ಘಟನೆ ಮಾರ್ಚ್ 15 ರಂದು ಬೆಳಕಿಗೆ ಬಂದಿದೆ. ಟೊಯೋಟಾ ಕಿರ್ಲೋಸ್ಕರ್ ಅಂಗಸಂಸ್ಥೆ ಆಗಿರುವ ಟೊಯೋಟಾ ಬುಶೋಕುವಿನಲ್ಲಿ ಇದು ನಡೆದಿದೆ. ಈ ಬಗ್ಗೆ ಉದ್ಯೋಗಿಗಳಿಗೆ ಕಂಪನಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಯಾರೇ ಕಿಡಿಗೇಡಿ ಇದ್ದರೂ ಕಠಿಣ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸುತ್ತೋಲೆಯಲ್ಲಿ ಏನಿದೆ?

ವಿಷಯ : ಅಶಿಸ್ತಿನ ಬರವಣಿಗೆ ಹಾಗೂ ಕಿಡಿಗೇಡಿ ಚಟುವಟಿಕೆ ಕುರಿತಾಗಿ

ಮೇಲೆ ತಿಳಿಸಿದ ವಿಷಯಕ್ಕೆ ಸಂಬಂದಪಟ್ಟಂತೆ ಕೆಲವು ಕಿಡಿಗೇಡಿ ಉದ್ಯೋಗಿಗಳು PU ಲೈನಿನ ಕೌಚಾಲಯಗಳಲ್ಲಿ “ಪಾಕಿಸ್ತಾನ ಕಿ ಜೈ.. ಕನ್ನಡಿಗರು,..ಮಕ್ಕಳು” ಎಂದು ಬರೆದಿರುತ್ತಾರೆ. ಈ ರೀತಿಯ ಬರವಣಿಗೆಗಳು ಉದ್ಯೋಗಳ ಮನಸ್ಸಿನಲ್ಲಿ ಆಶಾಂತಿಯನ್ನು ಸೃಷ್ಟಿಸುವುದಲ್ಲದೇ ಸಂಸ್ಥೆಯಲ್ಲಿ ತೀವ್ರ ರೀತಿಯ ಅಶಿಸ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಮುಂದುವರಿದು, ಈ ರೀತಿಯ ಬೆಳವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ “ದೇಶದ್ರೋಹದ” ಅಪರಾದಗಳಡಿಯಲ್ಲಿ ವರ್ಗೀಕೃತವಾಗಿರುತ್ತವೆ.

ಈ ರೀತಿಯಾದ ಕೃತ್ಯಗಳು ಮುಂದುವರಿದಲ್ಲಿ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತರುವುದರೊಂದಿಗೆ ಜೈಲುವಾಸ ಆಗುವವರೆಗೂ ಕಿಡಿಗೇಡಿಗಳನ್ನು ಬಿಡುವುದಿಲ್ಲ. ಜೊತೆಗೆ ಬೆರಳಚ್ಚು ತಜ್ಞರ ಗಮನಕ್ಕೆ ತಂದು ಈ ಕೃತ್ಯ ಎಸಗುವವರನ್ನು ಕಂಡುಹಿಡಿದು ಹೆಚ್ಚಿನ ಮಟ್ಟದಲ್ಲಿ ಶಿಕ್ಷೆಯಾಗುವವರೆಗೂ ಆಡಳಿತ ಮಂಡಳಿಯು ಕಾಳಜಿ ವಹಿಸಲು ಸಿದ್ಧವಿರುತ್ತದೆ.

ಹೀಗಾಗಿ ಎಲ್ಲಾ ವರ್ಗದ ಉದ್ಯೋಗಿಗಳು ಮೇಲೆ ತಿಳಿಸಿದ ವಿಷಯವನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕೆಂದು, ಈ ಮೂಲಕ ತಿಳಿಸಲಾಗಿದೆ. ಹಾಗೂ ಯಾವುದೇ ಉದ್ಯೋಗಿಗಳು ಈ ರೀತಿಯ ಕಿಡಿಗೇಡಿ ಕೃತ್ಯ ಮಾಡುವಾಗ ಸಿಕ್ಕಿ ಬಿದ್ದಲ್ಲಿ ಅತ್ಯಂತ ಕಠಿಣ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಆಡಳಿತ ಮಂಡಳಿಯು ತಿಳಿಸುತ್ತದೆ

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments