ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ನಿದೇರ್ಶನದ ಸಿನಿಮಾಗಳು ಎಂದರೆ ವಿಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಟೀಸರ್ ಅನ್ನು ಶಿವರಾಜ್ ಕುಮಾರ್ ರೀಲೀಸ್ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರ್ಜುನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ‘UI’ ಸಿನಿಮಾದ ಈ ಟೀಸರ್ ಎಲ್ಲರ ಗಮನ ಸೆಳೆಯುತ್ತಿದ್ದು, ಟ್ವೀಟರ್ನಲ್ಲಿ ಕಿಚ್ಚ ಸುದೀಪ್ ಕೂಡ ಟೀಸರ್ ರಿಲೀಸ್ ಮಾಡಿದ್ದಾರೆ.
ಉಪೇಂದ್ರ ಅವರು ಸಾಮಾನ್ಯವಾಗಿ ಸಿನಿಮಾ ಬಗ್ಗೆ ಯಾವ ವಿಷಯವನ್ನು ಬಿಟ್ಟು ಕೊಡದೆ, ಅದನ್ನ ತೆರೆ ಮೇಲೆನೆ ನೋಡಬೇಕು ಎನ್ನವಷ್ಟು ಸೀಕ್ರೆಟ್ ಆಗಿಯೇ ಎಲ್ಲವನ್ನೂ ಇಟ್ಟಿರುತ್ತಾರೆ, ಅದೇ ರೀತಿ ನಟ ಉಪೇಂದ್ರ ತಮ್ಮ UI ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದು, ಈ ಹಿಂದೆ ‘UI’ ಟೀಸರ್ ಅಂತ ಹೇಳಿ ಕತ್ತಲು ಕತ್ತಲು ಬರೀ ಕತ್ತಲು ಅಂತ ಸೌಂಡ್ ಟೀಸರ್ ಬಿಟ್ಟಿದ್ದರು.
ಉಪೇಂದ್ರ ಅವರು ಹಲವು ಸೂಪರ್ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ಬಹಳ ನಿರೀಕ್ಷೆ ಸೃಷ್ಟಿ ಆಗಿದೆ. ಉಪೆಂದ್ರ ಅವರು ಕುದುರೆ ಏರಿ ಬರುತ್ತಾರೆ. ಈಸಿನಿಮಾದಲ್ಲಿ ಸಾಧು ಕೋಕಿಲ ಹಾಗೂ ರವಿ ಶಂಕರ್ ಪಾತ್ರಗಳು ಕೂಡ ಗಮನ ಸೆಳೆದಿವೆ. ಇದು ‘ಎಐ ಜಗತ್ತಲ್ಲ… ಇದು ಯುಐ ಜಗತ್ತು..’ ಎಂದು ಲೈನ್ ಹೇಳುವ ಮೂಲಕ ಗಮನ ಸೆಳೆದಿದೆ.
https://www.youtube.com/watch?v=WChDHiCGnhI