ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಸೊಂಟ ಬಳಕಿಸಿ ಕುಣಿದು ಖುಷಿಪಟ್ಟಿದ್ದಾರೆ. ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಪೇಜ್‌ನಲ್ಲಿ ತಮ್ಮದೇ ವಿಶೇಷ ವಿಡಿಯೋ ಹಂಚಿಕೊಳ್ತಾರೆ. ಬೋಲ್ಡ್ ಅನಿಸೋ ಡ್ರೆಸ್ ತೊಟ್ಟು ಪೋಸ್ ಕೊಟ್ಟ ವಿಡಿಯೋ ಒಂದನ್ನ ಶೇರ್ ಮಾಡಿದ್ದಾರೆ..
ಸದ್ಯದ ಟ್ರೆಂಡ್‌ನ ರೀಲ್ಸ್ ಮಾಡೋ ಖುಷಿಯನ್ನೂ ರಾಧಿಕಾ ಕುಮಾರಸ್ವಾಮಿ ಎಂದೂ ಮಿಸ್ ಮಾಡಿಕೊಳ್ಳೊದಿಲ್ಲ. ಸ್ಪೆಷಲ್ ಅನಿಸೋ ರೀಲ್ಸ್‌ಗಳನ್ನೂ ಮಾಡೋದು ಇದೆ. ಅದಕ್ಕೆ ಸದ್ಯದ ತಾಜಾ ರೀಲ್ಸ್ ಒಂದು ಸಾಕ್ಷಿ ಆಗುತ್ತದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸೌಂದರ್ಯ ಅಭಿನಯದ ಈ ಚಿತ್ರದಲ್ಲಿ ಒಂದು ಸ್ಪೆಷಲ್ ಹಾಡಿದೆ. ಇದನ್ನ ಎಸ್.ಜಾನಕಿ ಹಾಗೂ ಮನು ಹಾಡಿದ್ದಾರೆ. ಇದೀಗ ಇದೇ ಹಾಡಿಗೆ ನಟಿ ರಾಧಿಕಾ ಕುಮಾರಸ್ವಾಮಿ ರೀಲ್ಸ್ ಮಾಡಿದ್ದಾರೆ.