ದೇವನಹಳ್ಳಿ : ಅನಧಿಕೃತ ಪಾರ್ಕಿಂಗ್ ಅಡ್ಡೆಗಳಿಂದ ದೇವನಹಳ್ಳಿ ಜನತೆ ಹೈರಾಣ ಆಗಿದ್ದಾರೆ. ಇದನ್ನ ಕಂಡು ಕಾಣದಂತೆ ಟ್ರಾಫಿಕ್ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣ ಬೈಪಾಸ್ ನಲ್ಲಿ ಸ್ಥಾಪಿತವಾಗಿರುವ ಹೊಟೇಲ್ಗಳು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳನ್ನು ಆಕ್ರಮಿಸಿಕೊಂಡಿವೆ.
ಪ್ರತಿದಿನ ಪ್ರಯಾಣಿಕರು ಊಟೋಪಚಾರಕ್ಕೆ ಇಲ್ಲಿ ತಮ್ಮ ವಾಹನಗಳನ್ನ ನಿಲ್ಲಿಸುತ್ತಾರೆ. ತಮ್ಮ ತಮ್ಮ ಹೊಟೇಲ್ಗಳಿಗೆ ಬರುವ ಗ್ರಾಹಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಹೊಟೇಲ್ ಗಳು ಸರ್ವೀಸ್ ರಸ್ತೆಗಳನ್ನು ಆಕ್ರಮಿಸಿಕೊಂಡು ಸುಗಮ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ. ಕೂಡಲೇ ದೇವನಹಳ್ಳಿ ಟ್ರಾಫಿಕ್ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.