ತುಮಕೂರು : ಮಧುಗಿರಿ ಪೊಲೀಸರಿಂದ ಮಿಂಚಿನ ಕಾರ್ಯಚರಣೆ.ಅಂತರಾಜ್ಯ ಕಳ್ಳರಿಂದ 10 ಲಕ್ಷ ರೂಪಾಯಿಯ ಬೆಲೆಬಾಳುವ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಬೈಪಾಸ್ ಬಳಿಯ ಕೊಡಿಗೇನಹಳ್ಳಿ ಜಂಕ್ಷನ್ ಸಮೀಪ PSI ಜೆ. ಮುತ್ತುರಾಜ್ ,ಹಾಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆಂಧ್ರಪ್ರದೇಶದ ರೊದ್ಧಕಂಪಲ್ಲಿಯ ನರಸಿಂಹಮೂರ್ತಿ, ಸುರೇಶ್ ಹಾಗೂ ಬೋಯಾ ನರೇಶ್ ಎಂಬುವರನ್ನು ಬಂಧಿಸಿ, ಅವರಿಂದ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪಾವಗಡ, ಗೌರಿಬಿದನೂರು, ಹಿಂದೂಪುರ, ಪೆನಗೊಂಡ, ಬತ್ತಲಪಲ್ಲಿ, ಮಾಡಕಸಿರ ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರು.


