Saturday, September 13, 2025
27.2 C
Bengaluru
Google search engine
LIVE
ಮನೆ#Exclusive Newsಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ ; ಬಿ.ಫೌಜಿಯಾ ತರನ್ನುಮ್ ಪ್ರಶಸ್ತಿಗೆ ಆಯ್ಕೆಯಾದ DC

ಅತ್ಯುತ್ತಮ‌ ಚುನಾವಣಾ ಪದ್ದತಿ ಅಳವಡಿಕೆ ; ಬಿ.ಫೌಜಿಯಾ ತರನ್ನುಮ್ ಪ್ರಶಸ್ತಿಗೆ ಆಯ್ಕೆಯಾದ DC

ಕಲಬುರಗಿ : ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯತ್ತಮ ಚುನಾವಣಾ ಪದ್ದತಿ ಅಳವಡಿಸಿಕೊಂಡು ಅನುಷ್ಟಾನಕ್ಕೆ ತಂದಿದ್ದಕ್ಕಾಗಿ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿದ್ದು,ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಿದೆ.

ಈ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಭಾರತ ಚುನಾವಣಾ ಆಯೋಗವು ಇದೇ ಜನವರಿ 25 ರಂದು ನವದೆಹಲಿಯ ದೆಹಲಿ ಕಂಟೋನ್ಮೆಂಟ್ ಪ್ರದೇಶದ ಮಾಣಿಕಶಾ ಸೆಂಟರ್ ನಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಇನ್ನು ಜನರಲ್‌ ಕೆಟಗರಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿರುವ 9 ಜನ ಜಿಲ್ಲಾ ಚುನಾವಣಾಧಿಕಾರಿಗೆ ಮತ್ತು ಇಬ್ಬರು ಐ.ಪಿ‌.ಎಸ್. ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಪ್ರಶಸ್ತಿಗೆ ಭಾನರಾದ ಕರ್ನಾಟಕದ ಏಕೈಕ ಅಧಿಕಾರಿಯಾಗಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments