ಬೀದರ್ : ಬೀದರ್ ನಲ್ಲಿ ದರೋಡೆ, ಕೊಲೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಹಾಡುಹಗಲೆ ಕಳ್ಳತನವಾಗಿದೆ.ಬೀದರ್ ನಗರದ ಜೈಲ್ ಹಿಂದಿನ SVP ಕಾಲೋನಿಯಲ್ಲಿ ಘಟನೆ ನಡೆದಿದೆ.ಹಾಡು ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ, ನಗದು ತೆಗೆದುಕೊಂಡ ಹೋದ ಕಳ್ಳರು.
ಮನೆಯಲ್ಲಿದ್ದ 62 ಸಾವಿರ ನಗದು ಹಣ, ಒಂದು ಲ್ಯಾಪ್‌ಟಾಪ್, 25 ಸಾವಿರ ರೂ.ಯ ಗಡಿಯಾರ, ಎರಡು ತೋಲಾ ಬೆಳ್ಳಿ ಸೇರಿದಂತೆ ಒಟ್ಟು 1 ಲಕ್ಷ 62 ಸಾವಿರ ಮೌಲ್ಯದ ವಸ್ತುಗಳು ಕಳ್ಳತನ ಮಾಡಿದ ಖದೀಮರು. ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.