ಕಾಟೇರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರೋ ಸಿನಿಮಾ. ಡಿ ಬಾಸ್ ವೃತ್ತಿ ಬದುಕಿನ ದಿಕ್ಕನ್ನೇ ಬದಲಿಸಿದ ಸಿನಿಮಾ ಇದು ಅಂದ್ರು ತಪ್ಪಾಗೋದಿಲ್ಲ.. ಇವತ್ತು ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಸಿನಿಮಾಗೆ ಬಂಡವಾಳ ಹಾಕಿರೋ ರಾಕ್ ಲೈನ್ ವೆಂಕಟೇಶ್ ಕೂಡ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ, ಕೋಟ್ಯಾಂತರ ರೂಪಾಯಿ ಹಣ ಗಳಿಸುತ್ತೆ ಅನ್ನೋ ಭರವಸೆಯಲ್ಲಿದ್ದಾರೆ.
ಇನ್ನು ಸಿನಿಮಾ ತೆರೆಕಂಡ ದಿನದಿಂದ ಇವತ್ತಿನವರೆಗೂ ಏನಿಲ್ಲ ಅಂದ್ರು ಸುಮಾರು 50 ಕೋಟಿಗೂ ಮೀರಿದ ಗಳಿಕೆ ಮಾಡುತ್ತಿದೆ. ಇಂತಹ ಸಿನಿಮಾದ ಲಿಂಕ್ ಈಗ ವೈರಲ್ ಆಗ್ತಾ ಇದೆ. ಜಸ್ಟ್ 40 ರೂಪಾಯಿ ಕೊಟ್ರೆ ಕಾಟೇರ ಚಿತ್ರದ ಪೈರಸಿ ಲಿಂಕ್ ಸಿಗ್ತಾ ಇದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಂಗಾನಾಯಕ್ ಎಂಬಾತನಿಂದ ಲಿಂಕ್ ಮಾರಾಟವಾಗುತ್ತಿದೆ. 40 ರಿಂದ 50 ರೂಪಾಯಿಗೆ ಕಾಟೇರ ಚಿತ್ರದ ಲಿಂಕ್ ಮಾರಾಟ ಮಾಡುತ್ತಿದ್ದ.
ರಾಯಚೂರು ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಟೇರ ಚಿತ್ರದ ವಿತರಣೆ ವ್ಯವಸ್ಥಾಪಕರು ಕೊಟ್ಟ ದೂರಿನನ್ವಯ ಕೇಸ್ ರಿಜಿಸ್ಟರ್ ಮಾಡ್ಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ದೇವದುರ್ಗದ ಮೌನೇಶ ಲಾಲಪ್ಪ ಎಂಬ ವ್ಯಕ್ತಿ ಟಿಲಿಗ್ರಾಂ ಮೂಲಕ ಲಿಂಕ್ ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಕಾಪಿ ರೈಟ್ ಮತ್ತು 420 ಐಪಿಸಿ ಅಡಿಯಲ್ಲಿ ಕೇಸ್ ಮಾಡಿರುವ ಪೊಲೀಸ್ರು ಮುಂದಿನ ತನಿಖೆ ನಡೆಸುತ್ತಿದ್ದಾರೆ.