ಮೈಸೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ವಿವಾದಾದ್ಮಕ ಹೇಳಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಮೈಸೂರು ಹಾಗೂ ಮಂಡ್ಯ ಬಂದ್ಗೆ ಕರೆ ನೀಡಿವೆ. ಆದರೆ, ಮೈಸೂರಿನಲ್ಲಿ ಬೆಳಗ್ಗೆ ಎಂದಿನಂತೆಯೇ ಬಸ್ ಸಂಚಾರ ಆರಂಭವಾಗಿದ್ದು, ಜನರಿಗೆ ಬಂದ್ ಬಿಸಿ ತಟ್ಟಿಲ್ಲ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಸಹಜ ಸ್ಥಿತಿ ಇದೆ. ಅದೇ ರೀತಿ, ಮೈಸೂರಿನಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಎಂದಿನಂತೆಯೇ ಬಸ್‌ಗಳು ತೆರಳುತ್ತಿವೆ.
ಮಂಡ್ಯದಲ್ಲಿಯೂ ಸಹಜ ಸ್ಥಿತಿ
ಮಂಡ್ಯದಲ್ಲಿ ಕೂಡ ಬೆಳಗ್ಗೆ ಎಂದಿನಂತೆಯೇ ಬಸ್ ಸಂಚಾರ ನಡೆಯುತ್ತಿದೆ. ಸಾರಿಗೆ ಬಸ್‌ಗಳು ಮಂಡ್ಯದಿಂದ ಬೇರೆಡೆಗೆ ತೆರಳುತ್ತಿವೆ. ವ್ಯಾಪಾರ ವಹಿವಾಟು ಕೂಡ ಎಂದಿನಂತೆಯೇ ಆರಂಭವಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಂಡ್ಯ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನೂ ಬಂದ್ ಬಿಸಿ ಆರಂಭವಾಗಿಲ್ಲ


