ಬೆಂಗಳೂರು : ರಾಜ್ಯ ಸರ್ಕಾರಿ ಸಾರಿಗೆ ಬಸ್ಸುಗಳ ಪ್ರಯಾಣ ಟಿಕೆಟ್ ದರವನ್ನು ಶೇ. 15ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಗೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಇದಕ್ಕೆ ಟಾಂಗ್ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 2008ರಿಂದ 2012ರವರೆಗೆ ಆರ್. ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಏಳು ಬಾರಿ ಸಾರಿಗೆ ಟಿಕೆಟ್ ದರ ಏರಿಸಿದ್ದಲ್ಲದೆ, ಜನರ ಮೇಲೆ ಒಟ್ಟಾರೆ ಶೇ. 47.8ರಷ್ಟು ಹೆಚ್ಚುವರಿ ದರದ ಬರೆ ಹಾಕಿದ್ದರು ಎಂದು ಹೇಳಿದ್ದಾರೆ.ಇದೀಗ ಅವರು ಸಾರಿಗೆ ದರ ಹೆಚ್ಚಳ ಮಾಡಿದ್ದರ ಕುರಿತು ಅಂಕಿ ಅಂಶಗಳ ಸಮೇತ ಬಿಡುಗಡೆ ಮಾಡಿದ್ದಾರೆ.
ವರ್ಷ ದರ ಹೆಚ್ಚಳ
=================================================
- 29/8/2008 12.01%
- 7/7/2009 3.56%
- 3/3/2010 4.76%
- 23/6/2010 3.50%
- 26/6/2011 6.95%
- 19/12/2011 5.01%
- 30/09/2012 12.00%