Wednesday, January 28, 2026
27.9 C
Bengaluru
Google search engine
LIVE
ಮನೆ#Exclusive Newsಇವೇ ನೋಡಿ ವಿಶ್ವದ ಅತ್ಯಂತ ದುಬಾರಿ ವಾಚ್‌! ಇದರ ರೇಟ್‌ ಕೇಳಿದ್ರೆ ನೀವು ಶಾಕ್‌ ಆಗೋದು...

ಇವೇ ನೋಡಿ ವಿಶ್ವದ ಅತ್ಯಂತ ದುಬಾರಿ ವಾಚ್‌! ಇದರ ರೇಟ್‌ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!

ಸಮಯ ಅನ್ನೋದು ಬೆಲೆ ಕಟ್ಟಲಾಗದ್ದು. ಆದ್ರೆ ಅದೇ ಸಮಯವನ್ನು ತಿಳಿಸುವ ವಾಚ್​ಗೆ ಲಕ್ಷ ಲಕ್ಷ ಕೋಟಿ ಕೋಟಿ ಬೆಲೆಯಿದೆ. ಅಂಬಾನಿಯ ಅಂಟಿಲಿಯಾ ಬಂಗಲೆಯಲ್ಲಿರುವ ಕಾರ್​ಗಳ ಮೌಲ್ಯದ ವಾಚ್​ಗಳು ಕೂಡ ಬಜಾರ್​ನಲ್ಲಿ ಬಂದಿವೆ.ವಾಚ್​ಗಳು ಈಗ ಕೇವಲ ಟೈಮ್​ಪೀಸ್​ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್​, ಮಾರ್ಕ್​ ಜುಕರ್ ಬರ್ಗ್​ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್​ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್​​ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆ.

ಸುಪ್ರೀಮ್ ಲಕ್ಸುರಿ ಗುರುತಾಗಿ, ಐಷಾರಾಮಿತನದ ಕಟ್ಟ ಕಡೆಯ ಎತ್ತರವಾಗಿ ಗುರುತಿಸಿಕೊಂಡಿದೆ ಹ್ಯಾಲುಸಿನೇಷನ್ ಎಂಬ ಈ ಡೈಮಂಡ್ ವಾಚ್. ಈ ವಾಚ್​ನ ಬೆಲೆ ಕೇಳಿದ್ರೆ ಎಂತವರ ತಲೆಯೂ ಕೂಡ ಒಮ್ಮೆ ಗಿರಽ ಅನ್ನದೇ ಇರಲ್ಲ. ಈ ವಾಚ್​ನ ಬೆಲೆ ಬರೋಬ್ಬರಿ 500 ಮಿಲಿಯನ್ ಡಾಲರ್​, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 466 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು
ಇದನ್ನು ಅಪ್ಪಟ ವಜ್ರಗಳ ಹರುಳಿನಿಂದಲೇ ತಯಾರಿಸಲಾಗಿದೆ. ಲಾರೆನ್ಸ್ ಗ್ರಾಫ್​ ಎಂಬ ಉದ್ಯಮಿ 2014ರಲ್ಲಿ ಈ ಒಂದು ಬಾಸಲ್​ವರ್ಲ್ಡ್​​ಗೆ ಕಾಲಿಟ್ಟಿದ್ದರು. ವಿಶೇಷವಾದದ್ದು ಹಾಗೆ ಅಷ್ಟೇ ಐಶಾರಾಮಿ ಹಾಗೂ ಆಕರ್ಷಕ ವಾಚ್ ಸಿದ್ಧಪಡಿಸುವ ಗುರಿ ಅವರದ್ದಿತ್ತು. ಹೀಗಾಗಿ ಹಲವು ಬಣ್ಣದ ವಜ್ರಗಳಿಂದ ಕೂಡಿದ 110 ಕ್ಯಾರೆಟ್​ನ ಈ ವಾಚ್​​ನ್ನು ಸಿದ್ಧಪಡಿಸಿದ್ದಾರೆ. ಈ ಹ್ಯಾಲುಸಿನೇಷನ್ ವಾಚ್​ ಜಗತ್ತಿನಲ್ಲಿ ಅತ್ಯಂತ ವಿರಳವಾದ ಹಾಗೂ ದುಬಾರಿಯಾದ ವಾಚ್​ನ ಪಟ್ಟಿಯಲ್ಲಿದೆ. ಹಲವು ಬಣ್ಣಗಳಲ್ಲಿ ಬರುವ ಈ ವಾಚ್ ತಿಳಿ ಗುಲಾಬಿ, ನೀಲಿ, ಹಸಿರು, ಆರೆಂಜ್​ ಹಾಗೂ ಹಳದಿ ಬಣ್ಣಗಳಲ್ಲಿ ಈ ವಾಚ್​ಗಳನ್ನು ಸಿದ್ಧಪಡಿಸಲಾಗಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments