ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರೋ ಕ್ಯೂಟ್​ ಜೋಡಿ. ಬಿಗ್​ಬಾಸ್​ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಬಿಗ್​​ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ಸಜ್ಜಾಗಿದ್ದಾರೆ.

ಇದೀಗ ಮಧ್ಯೆ ಮದುವೆಗೂ ಮುನ್ನವೇ ನಟಿ ದಿವ್ಯಾ ಉರುಡುಗ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೌದು, ನಟಿ ದಿವ್ಯಾ ಉರುಡುಗ ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ನಟಿ ದಿವ್ಯಾ ಖರೀದಿ ಮಾಡಿರೋ ಕಾರಿನ ಹೆಸರು ಅಟಾ ನೆಕ್ಸನ್ ಕ್ರಿಯೇಟಿವ್​  ಎಸ್​ ಡಾರ್ಕ್ ಆವೃತ್ತಿ (Rata Nexon Creative+S Dark Edition). ಈ ಕಾರಿನ ಬೆಲೆಯೂ 12.60 ಲಕ್ಷ ರೂಪಾಯಿದ್ದಾಗಿದೆ ಎಂದು ಅಂದಾಜಿಸಲಾಗಿದೆ. 

ಇನ್ನು, ಹೊಸ ಕಾರನ್ನು ಖರೀದಿ ಮಾಡಿರೋ ಖುಷಿಯಲ್ಲಿ ನಟಿ ದಿವ್ಯಾ ಉರುಡುಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ, ಮತ್ತೊಬ್ಬ ಅಭಿಮಾನಿ ಎಲ್ಲಾ ಮಹಿಳೆಯರ ಸ್ಪೂರ್ತಿ ನಮ್ಮ ಹೆಮ್ಮೆಯ ದಿವ್ಯ ಊರುಡುಗ ಅಂತ ಕಾಮೆಂಟ್​ ಮಾಡಿದ್ದಾರೆ.

ಬಿಗ್​ಬಾಸ್ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ದಿವ್ಯಾ ಉರುಡುಗ ಸದ್ಯ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಭಾವಿ ಪತ್ನಿ ಅರವಿಂದ್​ ಕೆಪಿ ಕೂಡ ಭಾಗಿಯಾಗಿದ್ದಾರೆ. ಈ ಇಬ್ಬರ ನಡುವೆ ಬಿಗ್​​ಬಾಸ್ ಮನೆಯಲ್ಲಿದ್ದಾಗ ಸ್ನೇಹ ಬೆಳೆಯಿತು. ಬಿಗ್​ಬಾಸ್​ ಮನೆಯಿಂದ ಹೊರಗೆ ಬಂದ ಕೂಡಲೇ ಇಬ್ಬರ ನಡುವಿನ ಈ ಅನುಬಂಧ ಮುಂದುವರೆದಿತ್ತು. ಈ ಇಬ್ಬರು ಬಿಗ್​​​​​ಬಾಸ್​​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಅವರ ಮಾತು, ಟ್ಯಾಲೆಂಟ್​ಗೆ ಅದೆಷ್ಟೋ ಜನರು ಫಿದಾ ಆಗಿಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights