Wednesday, April 30, 2025
24 C
Bengaluru
LIVE
ಮನೆ#Exclusive News'ನಿಯಂತ್ರಣಕ್ಕೆ ಸಿಕ್ತಿಲ್ಲ': ಕಟ್ಟಡಕ್ಕೆ ಢಿಕ್ಕಿಯಾದ ವಿಮಾನ, ಭೀಕರ ಅಪಘಾತ

‘ನಿಯಂತ್ರಣಕ್ಕೆ ಸಿಕ್ತಿಲ್ಲ’: ಕಟ್ಟಡಕ್ಕೆ ಢಿಕ್ಕಿಯಾದ ವಿಮಾನ, ಭೀಕರ ಅಪಘಾತ

ಹೊನೊಲುಲು: ಅಮೆರಿಕದ ಹವಾಯಿಯಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಕಟ್ಟಡಕ್ಕೆ ಢಿಕ್ಕಿಯಾಗಿ ಪತನವಾಗಿದೆ.

ಅಮೆರಿಕದ ಹವಾಯಿಯಲ್ಲಿರುವ ಹೊನೊಲುಲು ವಿಮಾನ ನಿಲ್ದಾಣದ ಬಳಿ ಈ ಘಟನೆ ನೇಡೆದಿದ್ದು, ವಿಮಾನ ನಿಲ್ದಾಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆಸ್ನಾ 208 ಪ್ರಯಾಣಿಕ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.

ಮೂಲಗಳ ಪ್ರಕಾರ ತರಬೇತಿ ಹಾರಾಟದಲ್ಲಿದ್ದ ವಿಮಾನವು ವೇಗವಾಗಿ ತನ್ನ ಎತ್ತರ ಕಳೆದುಕೊಂಡು ಎಡಕ್ಕೆ ತಿರುಗಿ ಖಾಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಮತ್ತು ತರಬೇತಿ ಪೈಲಟ್ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರೆಸ್ಟನ್ ಕಲುಹಿವಾ (ಪ್ರಯಾಣಿಕ) 22 ವರ್ಷದ ತರಬೇತಿ ಪೈಲಟ್ ಹಿರಾಮ್ ಡಿಫ್ರೈಸ್ ಎಂದು ಗುರುತಿಸಲಾಗಿದೆ.

ಕಮಲಾ ಏರ್ ನಿರ್ವಹಿಸುತ್ತಿದ್ದ ವಿಮಾನವು ಅಪಘಾತದ ನಂತರ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಕೂಡಲೇ ಹೊನೊಲುಲು ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ನಗರದ ತುರ್ತು ನಿರ್ವಹಣಾ ಇಲಾಖೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಕಟ್ಟಡದಲ್ಲಿ ಯಾರೂ ಇಲ್ಲದ ವೇಳೆ ವಿಮಾನ ಢಿಕ್ಕಿಯಾಗಿದೆ.

ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಫೆಡರಲ್ ವಿಮಾನಯಾನ ಆಡಳಿತ (ಎಫ್‌ಎಎ) ಅಪಘಾತದ ಬಗ್ಗೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments