Wednesday, April 30, 2025
32 C
Bengaluru
LIVE
ಮನೆ#Exclusive Newsವಿಜಯಪುರದಲ್ಲಿ ಅಬಕಾರಿ ಇಲಾಖೆಯಿಂದ ಭರ್ಜರಿ‌ ಕಾರ್ಯಾಚರಣೆ....!

ವಿಜಯಪುರದಲ್ಲಿ ಅಬಕಾರಿ ಇಲಾಖೆಯಿಂದ ಭರ್ಜರಿ‌ ಕಾರ್ಯಾಚರಣೆ….!

ವಿಜಯಪುರ : ವಿಜಯಪುರ ಅಬಕಾರಿ ಇಲಾಖೆ ಭರ್ಜರಿ‌ ಕಾರ್ಯಾಚರಣೆ ನಡೆಸಿ ನಕಲಿ ಮದ್ಯ ತಯಾರಿಕೆ ಘಟಕದ ಮೇಲೆ‌ ದಾಳಿ ನಡೆಸಿ‌ ಲಕ್ಷಾಂತರ ಮೌಲ್ಯದ ಮದ್ಯವನ್ನ ಸೀಜ್ ಮಾಡಿದ್ದಾರೆ. ಜಿಲ್ಲೆದ್ಯಾಂತ ಇತ್ತಿಚೀಗೆ ನಕಲಿ ಮದ್ಯ ಸರಬರಾಜಾಗ್ತಿರೋ ಬಗ್ಗೆ ಸಾಕಷ್ಟು ದೂರು ಆಲಿಸಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ನಕಲಿ ಮದ್ಯ ತಯಾರಿಕಾ ಘಟಕವನ್ನ ಪತ್ತೆ ಮಾಡಿದ್ರು. ‌ಇಂದು ಮುಂಜಾನೆ ವಿಜಯಪುರ ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ಮದ್ಯ ತಯಾರು ಘಟಕವನ್ನ ಸೀಜ್ ಮಾಡಿದ್ದಾರೆ. ಸಿಂದಗಿ ಬಳಿಯ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಶಾಲೆ ಹಿಂದೆಯೇ ಈ ಅಕ್ರಮ ಕೂಟ ನಡೆದಿದೆ. ಲೋಯೋಲ ಶಾಲೆ ಹಿಂದಿರುವ ಅಮೋಘಸಿದ್ಧ ಬಸಪ್ಪ ಹೂಗಾರ ಜಮೀನಿನಲ್ಲಿ ಶೆಡ್ಡಿನ ನಿರ್ಮಾಣ ಮಾಡಿ ಇದೇ ಶೆಡ್ ನಲ್ಲಿ ಆರೋಪಿಗಳು ನಕಲಿ ಮದ್ಯ ತಯಾರು ಮಾಡ್ತಿದ್ರು. ನಕಲಿ ಸ್ಟಿಕ್ಕರ್, ಬಾಟಲ್ ಹಾಗೂ ಕಲಬೆರೆಕೆ ಮದ್ಯವನ್ನ ಬ್ರಾಂಡೆಡ್ ಮದ್ಯವಾದ ಇಂಪಿರಿಯಲ್ ಬ್ಲೂ, ಮ್ಯಾಕ್ ಡೊನಾಲ್ ಸೇರಿದಂತೆ ಕೆಲ ಬ್ರಾಂಡ್ ಹೆಸ್ರಲ್ಲಿ ನಕಲಿ ಮಾಡಲಾಗ್ತಿತ್ತು. ಇನ್ನೂ ಮಹರಾಷ್ಟ್ರ ಗಡಿ ಭಾಗದಲ್ಲಿ ಈ ನಕಲಿ ಮದ್ಯ ತಯಾರಿ ಘಟಕ ತಲೆ ಎತ್ತಿದ್ದು, ಹೈವೆ ಡಾಬಾಗಳು ಹಾಗೂ ಹಳ್ಳಿಗಳ ಅಂಗಡಿಗಳೆ ಇವರ ಮೈನ್ ಬ್ಯುಸಿನೆಸ್ ಪಾಯಿಂಟ್ ಆಗಿತ್ತಂತೆ. ಇನ್ನೂ ಇತ್ತಿಚೇಗಷ್ಟೆ ವಿಜಯಪುರಕ್ಕೆ ಅಬಕಾರಿ ಡಿಸಿಯಾಗಿದ್ದ ವೀರಣ್ಣ ಬಾಗೇವಾಡಿ ಈ ಬಗ್ಗೆ ವಿಶೇಚ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ. ಸದ್ಯ ಶೆಡ್ ನಲ್ಲಿ 40 ಲೀಟರ್ ಮದ್ಯ ಹಾಗೂ ನಕಲಿ ಮದ್ಯ ತಯಾರಿಸಲು ಬೇಕಾದ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 10 ಲಕ್ಷ ಎಂದು ಅಂದಾಜಿಸಲಾಗಿದೆ.‌ ಇನ್ನೂ ನಕಲಿ ಮದ್ಯ ತಯಾರು ಮಾಡ್ತಿದ್ದ ಶೆಡ್ ಮಾಲೀಕ ಅಮೋಘದತ್ತ ಸೇರಿದಂತೆ ಕೃಷ್ಣ, ಬಾಡಗೆ, ವಿನಾಯಕ್, ಅಭಿಶೇಕ್‌ ಸೇವರನ್ನ ಅಬಕಾರಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಆರೋಪಿಗಳು ಸಾಕಷ್ಟು ವರ್ಷಗಳಿಂದ ಈ ಕೃತ್ಯ ನಡೆಸುತ್ತಿದ್ದು, ಇದು ವರೆಗೂ ಈ ನಕಲಿ ಮದ್ಯವನ್ನ ಎಲ್ಲೆಲ್ಲಿ ಮಾರಾಟ ಮಾಡಿದ್ರು.‌ ಈ ಆರೋಪಿಗಳ ಹಿಂದೆ ಯಾರ್ಯಾರಿದ್ದಾರೆ ಎಂದು ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments