ಬಳ್ಳಾರಿ : ಮಾಜಿ ಸಂಸದೆ ಜೆ.ಶಾಂತಾ ಬಿಜೆಪಿ ತೊರೆದಿದ್ದಾರೆ. ಇದು ಬಳ್ಳಾರಿ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿದೆ. ಮಾಜಿ ಸಚಿವ ಶ್ರೀರಾಮುಲು ಸೋದರಿ ಜೆ.ಶಾಂತಾ ಕರ್ನಾಟಕ ರಾಜಕಾರಣ ಬಿಟ್ಟು ಆಂಧ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಆಂಧ್ರಪ್ರದೇಶ ಸಿಎಂ ಜಗನ್ಮೋಹನ ರೆಡ್ಡಿ ನೇತೃತ್ವದಲ್ಲಿ ಪಕ್ಷವನ್ನು ಸೇರಿದ್ದಾರೆ. ಮಂಗಳವಾರ ವಿಜಯವಾಡ ತಾಡಿಯಲ್ಲಿ ಸಿಎಂ ಕ್ಯಾಂಪ್ ಆಫಿಸ್ನಲ್ಲಿ ವೈಎಸ್ಆರ್ಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ಪಿ ಪಕ್ಷದಿಂದ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಜೆ. ಶಾಂತಾ ಸ್ಪರ್ಧಿಸುವ ಸಾಧ್ಯತೆಗಳಿವೆ. ಅನಂತಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಲೋಕಸಭಾ ಕ್ಷೇತ್ರ ಬರಲಿದೆ. ಇಲ್ಲಿ ವಾಲ್ಮೀಕಿ ಸಮುದಾಯ ನಾಲ್ಕೂವರೆ ಲಕ್ಷ ಮತದಾರರಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಆಂಧ್ರದಲ್ಲಿ ಹಿಂದುಳೀದ ವರ್ಗಕ್ಕೆ ಸೇರಿದೆ.

ಜೆ. ಶಾಂತಾ ಅನಂತಪುರ ಜಿಲ್ಲೆಯ ಗುಂತಕಲ್ ಪಟ್ಟಣ ನಿವಾಸಿಯಾಗಿದ್ದಾರೆ. 2009ರಲ್ಲಿ ಶ್ರೀರಾಮುಲು ಸಹಕಾರ ದಿಂದ ಬಳ್ಳಾರಿಯಿಂದ ಸಂಸದೆತಯಾಗಿ ಆಯ್ಕೆಯಾಗಿದ್ದರು. ಉಪ ಚುನಾವಣೆಯಲ್ಲಿ ಸೋತಿದ್ದರು.


