ಡಿ.14ಕ್ಕೆ ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನ, 2024ಕ್ಕೆ 100ನೇ ವರ್ಷದ ಬರ್ತ್ಡೇ ಸಂಭ್ರಮ. ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಗೌರವಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಕೂಡ ಕಪೂರ್ ಕುಟುಂಬ ಆಯೋಜಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಿಎಂ ಕಚೇರಿಯಲ್ಲಿ ಕಪೂರ್ ಫ್ಯಾಮಿಲಿ ಮೋದಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದೆ.
ಕರೀನಾ ಕಪೂರ್ ದಂಪತಿ, ನೀತು ಕಪೂರ್, ಆಲಿಯಾ- ರಣ್‌ಬೀರ್ ಕಪೂರ್ ಜೋಡಿ, ಕರೀಷ್ಮಾ ಕಪೂರ್ ಕುಟುಂಬಸ್ಥರು ಮೋದಿರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಮಕ್ಕಳಾದ ಟಿಮ್ ಮತ್ತು ಜೆಹ್ ಹೆಸರನ್ನು ಬರೆದು ಪಿಎಂ ಆಟೋಗ್ರಾಫ್ ನೀಡಿರೋದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಕರೀನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೋದಿರವರ ಸರಳತೆ ಮತ್ತು ಬೆಂಬಲವನ್ನು ಕೊಂಡಾಡಿದ್ದಾರೆ.
ಅಂದಹಾಗೆ, ರಾಜ್ ಕಪೂರ್ 100ನೇ ವರ್ಷದ ಬರ್ತ್ ಆ್ಯನಿವರ್ಸರಿ ಪ್ರಯುಕ್ತ ಡಿ.13ರಿಂದ 15ರವರೆಗೆ 40 ನಗರಗಳಲ್ಲಿ 10 ಸಿನಿಮಾಗಳು 135 ಚಿತ್ರಮಂದಿರಗಳಲ್ಲಿ ಪ್ರಸಾರವಾಗಲಿದೆ ಎಂದು ನಟಿ ತಿಳಿಸಿದ್ದಾರೆ.
