ಮಂಡ್ಯ: ಮಾಜಿ ಸಿಎಂ ಎಸ್ಎಂ ಕೃಷ್ಣ ಮಂಗಳವಾರ ನಸುಕಿನಲ್ಲಿ ವಿಧಿವಶರಾಗಿದ್ದಾರೆ. ಏತನ್ಮಧ್ಯೆ, ಕೃಷ್ಣ ಅವರು ಹುಟ್ಟಿ ಬೆಳೆದಿದ್ದ ಮಂಡ್ಯ ಜಿಲ್ಲೆಯ ಸೋಮನಹಳ್ಳಿ ಗ್ರಾಮದಲ್ಲಿರುವ ನೂರಾರು ವರ್ಷಗಳ ಹಳೆ ನಿವಾಸ ಈಗ ಗಮನ ಸೆಳೆದಿದೆ.
ಸೋಮನಹಳ್ಳಿಯಲ್ಲಿರುವ ಹಳೆಯ ಮನೆಯಲ್ಲಿ ಈಗ ಅವರ ಸಂಬಂಧಿಕರು ವಾಸವಿದ್ದಾರೆ. ನೂರಾರು ವರ್ಷಗಳ ಹಳೆಯದಾದ ಮನೆಯನ್ನು ಇತ್ತೀಚೆಗೆ ರಿನೊವೇಷನ್ ಮಾಡಲಾಗಿದ್ದು, ಗಟ್ಟಿಮುಟ್ಟಾಗಿದೆ. ಇತ್ತೀಚಿನ ವರೆಗೂ ಮಂಡ್ಯಕ್ಕೆ ತೆರಳಿದಾಗ ಎಸ್ಎಂ ಕೃಷ್ಣ ತಾವು ಹುಟ್ಟಿ ಬೆಳೆದ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗುತ್ತಿದ್ದರಂತೆ.