ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು ಮುಡಾ ಸೈಟು ಅಕ್ರಮ ಹಂಚಿಕೆ ಆರೋಪದ ಪ್ರಕರಣ. ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ಈ ಕೇಸ್‌ನ ವಿಚಾರಣೆ ಎದುರಿಸಿದ್ದಾರೆ. ಮುಖ್ಯಮಂತ್ರಿ ಕುಟುಂಬಕ್ಕೆ ತಲೆನೋವಾಗಿರುವ ಮುಡಾ ಕೇಸ್‌ಗೆ ಇದೀಗ ED (ಜಾರಿ ನಿರ್ದೇಶನಾಲಯ) ಸ್ಫೋಟಕ ಟ್ವಿಸ್ಟ್ ನೀಡಿದೆ.
ಜಾರಿ ನಿರ್ದೇಶನಾಲಯ PMLA ಕಾಯಿದೆ ಅಡಿ ಮುಡಾ ಪ್ರಕರಣದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿದೆ. ಅದರಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಮೌಲ್ಯದ ಸೈಟ್‌ಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಇಡಿಯಿಂದ ಲೋಕಾಯುಕ್ತಕ್ಕೆ ತನಿಖಾ ಮಾಹಿತಿ ಒಳಗೊಂಡ ಪತ್ರ ಬರೆದಿದೆ. ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ದೆಹಲಿಯ ಪಿಟಿಐ ವರದಿ ಮಾಡಿದೆ.
ಮುಡಾ ಪ್ರಕರಣದಲ್ಲಿ ಬೇನಾಮಿ ಹಾಗೂ ನಕಲಿ ವ್ಯಕ್ತಿಗಳ ಹೆಸರಲ್ಲಿ 1095 ಸೈಟ್‌ಗಳ ಹಂಚಿಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೈಟ್ ಹಂಚಿಕೆಯಾದ ವಿಚಾರದಲ್ಲಿ ಸಾಕ್ಷಿಗಳನ್ನ ತಿರುಚಲಾಗಿದೆ. ಅನಗತ್ಯವಾಗಿ ಪ್ರಭಾವ ಬೀರಿರುವುದು, ಸಹಿಗಳ ನಕಲಿ ಮಾಡಿರುವುದು ಕಾನೂನು ಗಾಳಿಗೆ ತೂರಿ ಸೈಟ್ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಮುಡಾ ಪ್ರಕರಣದಲ್ಲಿ ಬೇನಾಮಿ ಹಾಗೂ ನಕಲಿ ವ್ಯಕ್ತಿಗಳ ಹೆಸರಲ್ಲಿ 1095 ಸೈಟ್‌ಗಳ ಹಂಚಿಕೆ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೈಟ್ ಹಂಚಿಕೆಯಾದ ವಿಚಾರದಲ್ಲಿ ಸಾಕ್ಷಿಗಳನ್ನ ತಿರುಚಲಾಗಿದೆ. ಅನಗತ್ಯವಾಗಿ ಪ್ರಭಾವ ಬೀರಿರುವುದು, ಸಹಿಗಳ ನಕಲಿ ಮಾಡಿರುವುದು ಕಾನೂನು ಗಾಳಿಗೆ ತೂರಿ ಸೈಟ್ ಹಂಚಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಲೋಕಾಯುಕ್ತ ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಪ ನಿರಾಕರಿಸಿ ರಾಜಕೀಯ ಪ್ರೇರಿತ ಎಂದಿದ್ದಾರೆ. ಆದರೆ ಪಾರ್ವತಿ ಅವರಿಗೆ ನೀಡಿರುವ 14 ಸೈಟ್‌ಗಳು ಅಕ್ರಮ ಎಂದು ಇ.ಡಿ ಹೇಳಿದೆ. ಸಿದ್ದರಾಮಯ್ಯ ಪಿಎ ಎಸ್.ಜಿ ದಿನೇಶ್ ಕುಮಾರ್ @ ಸಿಟಿ ಕುಮಾರ್ ಅವರಿಂದ ಒತ್ತಡ ಹಾಕಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.