Thursday, August 21, 2025
26.3 C
Bengaluru
Google search engine
LIVE
ಮನೆ#Exclusive NewsTop News'ಬ್ರಹ್ಮಗಂಟು' ಧಾರಾವಾಹಿ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಕಾರಣವೇನು?

‘ಬ್ರಹ್ಮಗಂಟು’ ಧಾರಾವಾಹಿ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಕಾರಣವೇನು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಹೈದರಾಬಾದಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತ: ಹಾಸನ ಜಿಲ್ಲೆ ಸಕಲೇಶಪುರದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ಮೇ 22, 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶೋಭಿತಾ ಕಿರುತೆರೆಯಿಂದ ದೂರವಾಗಿ ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಆದರೆ, ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ VJ ಆಗಿದ್ದ ಶೋಭಿತಾ, ನಂತರ ಬ್ರಹ್ಮಗಂಟು, ನಿನ್ನಿಂದಲೇ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.2015ರಲ್ಲಿ ಕುಮಾರ್ ದತ್ತ ಅವರೊಂದಿಗೆ ಎರಡೊಂದ್ಲಾ ಮೂರು ಹಾಗೂ “ಫಸ್ಟ್ ಡೇ, ಫಸ್ಟ್ ಷೋ” ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ ಶಿವಣ್ಣ  ಆತ್ಮಹತ್ಮೆಗೆ ಸಹನಟ ಹರ್ಷ ಗೌಡ  ಪ್ರತಿಕ್ರಿಯೆ ನೀಡಿದ್ದಾರೆ. ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ಹೀಗ್ಯಾಕೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ ಎಂದು ಹರ್ಷ ಅವರು  ಮಾತನಾಡಿದ್ದಾರೆ.

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ  ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.

ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ ನಿರ್ಧಾರ ಯಾರು ಮಾಡಬಾರದು. ಏನೇ ಇದ್ದರು ಎದುರಿಸಬಹುದಾಗಿತ್ತು ಎಂದು ಶೋಭಿತಾ ಸೂಸೈಡ್ ಬಗ್ಗೆ ಹರ್ಷ ಮಾತನಾಡಿದ್ದಾರೆ. ಸಹನಟಿಯ ಆತ್ಮಹತ್ಯೆಗೆ ನಟ ಭಾವುಕರಾಗಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments