Wednesday, January 28, 2026
17 C
Bengaluru
Google search engine
LIVE
ಮನೆ#Exclusive NewsTop Newsದೆಹಲಿ ಮಾರುಕಟ್ಟೆಗೂ KMF ಲಗ್ಗೆ: ಅಮುಲ್, ಮದರ್​ ಡೈರಿಗೆ ‘ನಂದಿನಿ’ ಪೈಪೋಟಿ

ದೆಹಲಿ ಮಾರುಕಟ್ಟೆಗೂ KMF ಲಗ್ಗೆ: ಅಮುಲ್, ಮದರ್​ ಡೈರಿಗೆ ‘ನಂದಿನಿ’ ಪೈಪೋಟಿ

ಉತ್ಕೃಷ್ಟ ಗುಣಮಟ್ಟ ಮತ್ತು ಹೊಸತನದೊಂದಿಗೆ ದೇಶ-ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಮ್ಮ ಕರ್ನಾಟಕದ ಹೆಮ್ಮೆಯ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳು ಇನ್ಮುಂದೆ ರಾಷ್ಟ್ರ ರಾಜಧಾನಿಯಲ್ಲಿಯೂ ದೊರೆಯಲಿವೆ. ನವೆಂಬರ್‌ 21 ರಿಂದ ಅಂದ್ರೆ ನಾಳೆಯಿಂದ ನವದೆಹಲಿಯಲ್ಲೂ ನಂದಿನಿ ಉತ್ಪನ್ನಗಳು  ಗ್ರಾಹಕರಿಗೆ ದೊರೆಯಲಿವೆ.

ಕೆಎಂಎಫ್‌ನ ನಂದಿನಿ ಉತ್ಪನ್ನಗಳು ಕರ್ನಾಟಕದ ಹೆಮ್ಮೆ ಅಂತಾನೇ ಹೇಳಬಹುದು. ನಂದಿನಿ ಹಾಲು, ಮೊಸರು, ತುಪ್ಪ, ಬೆಣ್ಣೆ, ಸಿಹಿ ತಿನಿಸುಗಳೆಂದರೆ ಎಲ್ಲರಿಗೂ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಒಂದು ಲೆಕ್ಕದಲ್ಲಿ ನಂದಿನಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸ ಗಳಿಸಿದ ಬ್ರ್ಯಾಂಡ್‌ ಅಂದರೆ ತಪ್ಪಾಗಲಾರದು. ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನವನ್ನು ರಾಜ್ಯದ ಜನರಿಗೆ ಪೂರೈಸುತ್ತಿದ್ದ ಕೆ.ಎಂ.ಎಫ್‌ ಕೆಲ ದಿನಗಳ ಹಿಂದೆಯಷ್ಟೆ ರೆಡಿ ಟು ಕುಕ್‌ ದೋಸೆ ಹಿಟ್ಟನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ನವೆಂಬರ್ 21ರಿಂದ ನವದೆಹಲಿಯಲ್ಲಿ ತನ್ನ ಹಾಲಿನ ಉತ್ಪನ್ನಗಳನ್ನು ಕೆಎಂಎಫ್ ಮಾರಾಟ ಮಾಡಲಿದೆ.

ಕರ್ನಾಟಕ ಹಾಲು ಒಕ್ಕೂಟ (KMF) ಹಾಲು, ಮೊಸರಿನಂತಹ ತಾಜಾ ಹಾಲಿನ ಉತ್ಪನ್ನಗಳೊಂದಿಗೆ ರಾಷ್ಟ್ರ ರಾಜಧಾನಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿದೆ. ಈ ಮೂಲಕ ದೆಹಲಿಯ ಡೈರಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಮದರ್‌ ಡೈರಿ, ಅಮುಲ್‌, ಮಧುಸೂದನ್‌ ಮತ್ತು ನಮಸ್ತೆ ಇಂಡಿಯಾದಂತಹ ಬ್ರ್ಯಾಂಡ್‌ಗಳಿಗೆ ನಮ್ಮ ಕರುನಾಡಿನ ಹೆಮ್ಮೆಯ ಕೆಎಂಎಫ್  ನಂದಿನಿ ಬ್ರ್ಯಾಂಡ್‌ಗಳು  ಪೈಪೋಟಿ ನೀಡಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments