ಬಾಗಲಕೋಟೆ: ಕೆಲವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಮಾಡುವ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ನ ಲಾಭ ಪಡೆಯಲು ಅನರ್ಹ ಆಗಿರೋರ ಕಾರ್ಡ್ ರದ್ದತಿ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆಹಾರ ಇಲಾಖೆಯಿಂದ ಕ್ಯಾಬಿನೆಟ್ಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಯಾರು ಅರ್ಹರಿದ್ದಾರೆ ಅವರಿಗೆ ಮಾತ್ರ ಸಿಗಬೇಕು. ಯಾರು ಅನರ್ಹರಿದ್ದಾರೆ, ಅವರನ್ನು ತೆಗೆದುಹಾಕಬೇಕು. ಅರ್ಹರಿದ್ದವರ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ, ಅವರಿಗೆ ಕೊಟ್ಟೇ ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಯಾರು ಅನುಕೂಲಸ್ಥರಿದ್ದಾರೆ ಅಂತವರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ ಎಂದಿದ್ದೇವೆ. ಇನ್ಕಮ್ ಟ್ಯಾಕ್ಸ್ ಕಟ್ಟುತ್ತಿದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ? ಸರ್ಕಾರಿ ನೌಕರಿ ಇರೋರಿಗೆ ಕೊಡಬೇಕಾ? ಅಂತಹ ಕಾರ್ಡ್ಗಳನ್ನು ಬಿಪಿಎಲ್ನಿಂದ ಎಪಿಎಲ್ ಕಾರ್ಡ್ ಆಗಿ ಮಾಡ್ತೀವಿ. ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹಾಗೆ ಮಾಡಬಹುದು ಎಂದು ಅನ್ಕೊಂಡಿದ್ದೇನೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.