ಮಂಡ್ಯ: ಜಮೀರ್ ಅಹಮದ್ ಹಾಗೂ ಆ ನಾಲ್ವರ ಜೊತೆ ಇದ್ದಿದ್ದು ನನ್ನ ಕರಾಳ ದಿನ ಎಂಬ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿಯವರ ಹೇಳಿಕೆಯಿಂದ ಆರಂಭವಾದ ಹಳೆಯ ದೋಸ್ತಿ ಜಗಳ ಇದೀಗ ತಾರಕಕ್ಕೇರಿದೆ. ಕುಮಾರಸ್ವಾಮಿ ಬಾಯಿಗೆ ಬಂದಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ನಾವು ತಯಾರಿಲ್ಲ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯದ ಮದ್ದೂರಿನ ಹೊಸಗಾವಿ ಗ್ರಾಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮದ್ದೂರಿನ ಹೊಸಗಾವಿ ಗ್ರಾಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಸ್ನೇಹಿತರನ್ನ ಬಿಟ್ಟು ಇವಾಗ ಜೆಡಿಎಸ್ ಪಕ್ಷ ಕುಟುಂಬದ ಪಕ್ಷವಾಗಿದೆ. ಇತಿಹಾಸ ಚರ್ಚೆ ಅವಶ್ಯಕತೆ ಇದ್ರೆ ಆಹ್ವಾನ ಕೊಡ್ತೇನೆ ವೇದಿಕೆ ಸಿದ್ದಪಡಿಸಲಿ ಎಂದು ಕೇಂದ್ರ ಸಚಿವ ಹೆಚ್ಡಿಕೆಗೆ ಬಹಿರಂಗ ಸವಾಲ್ ಹಾಕಿದರು.

ಮಾಜಿ ಮುಖ್ಯಮಂತ್ರಿ, ದೇಶ ಆಳಿದ ಪ್ರಧಾನಿ ಮಗ ಬಾಯಿಗೆ, ನಾಲಿಗೆಗೆ ಹಿಡಿತ ಇಲ್ಲದೆ ಮಾತನಾಡ್ತಾರೆ. ನಾನು ಉತ್ತರ ಕೊಡೋದು ಸೂಕ್ತ ಅಲ್ಲ. ಮಾತನಾಡಿದವರೆಲ್ಲ ಮಾತಿನಿಂದ ದೊಡ್ಡವರಾಗಲು ಸಾಧ್ಯವಿಲ್ಲ. ನಡವಳಿಕೆಯಿಂದ ದೊಡ್ಡವರಾಗೋದು. ನಾನು ಶಾಶ್ವತವಾಗಿ ಮಂತ್ರಿಯಲ್ಲ, ಜನರು ತಾತ್ಕಾಲಿಕವಾಗಿ ಅಧಿಕಾರ ಕೊಟ್ಟಿದ್ದಾರೆ. ನಾನು ಮಂತ್ರಿ ಅಂತ ಬಾಯಿಗೆ ಬಂದಾಗೆ ಮಾತನಾಡೋಕ್ಕಾಗುತ್ತಾ? ಎಂದು ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಕುಮಾರಸ್ವಾಮಿ ಅವರಿಗೆ ಅಸೆಂಬ್ಲಿಯಲ್ಲೇ ಉತ್ತರ ಕೊಟ್ಟಿದ್ದೇನೆ. ಇತಿಹಾಸ ಚರ್ಚೆ ಮಾಡಬೇಕಿದ್ರೆ ಒಂದು ಟೈಮ್ ನಿಗಧಿ ಮಾಡಿ ಅಂತ ರಿಕ್ವಿಸ್ಟ್ ಮಾಡಿದ್ದೆ. ಇವಾಗ ಅವರು ಪಾರ್ಲಿಮೆಂಟ್ ಗೆ ಹೋಗಿದ್ದಾರೆ ನಾನು ಅಸೆಂಬ್ಲಿಯಲ್ಲಿದ್ದೇನೆ. ಅವರು ಇಲ್ಲಿಗೆ ಬರಲು ಆಗಲ್ಲ, ನಾನು ಪಾರ್ಲಿಮೆಂಟ್ ಗೆ ಹೋಗಲು ಆಗಲ್ಲ. ಮಾಧ್ಯಮ, ಸಾರ್ವಜನಿಕರ ಮುಂದೆ ನನ್ನ ನಾಲಿಗೆ ಹರಿ ಬಿಡಲ್ಲ. ನನ್ನ ಆಸ್ತಿ ಅವರಿಗೆ ಕೊಟ್ಟಿಲ್ಲ, ಅವರ ಆಸ್ತಿ ನನಗೆ ಕೊಟ್ಟಿಲ್ಲ. ನನ್ನ ಅವರ ನಡುವೆ ಕಮಿಟ್ಮೆಂಟ್ ಇಲ್ಲ ರಾಜಕೀಯ ಅಷ್ಟೆ. ಯಾರ ಇತಿಹಾಸವನ್ನ ಬುಕ್ ನಲ್ಲಿ ಪ್ರಿಂಟ್ ಮಾಡಬೇಕು. ಅಸೆಂಬ್ಲಿಯಲ್ಲಿ ಚರ್ಚೆಯಾದರೆ ಮುಂದಿನ ಪೀಳಿಗೆಗೆ ಉಪಯೋಗ. ಕುಮಾರಸ್ವಾಮಿ ಬಾಯಿಗೆ ಬಂದಾಗೆ ಮಾತನಾಡಿದ್ರೆ ಕೇಳಿಸಿಕೊಳ್ಳೋಕೆ ತಯಾರಿಲ್ಲ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ನಾನು ಲಘುವಾಗಿ ಮಾತನಾಡಿದ್ರೆ ನನ್ನ ಕ್ಷೇತ್ರದ ಜನ ಗೌರವ ಕೊಟ್ಟು ಎರಡು ಸಲ ಸೋಲಿಸಿ 6 ಬಾರಿ ಗೆಲ್ಲಿಸಿದ್ದಾರೆ. ಲೋಕಸಭಾ ಸದಸ್ಯನಾಗಿ ಮಂತ್ರಿಯಾಗಿದ್ದೇನೆ. ಸಾರ್ವಜನಿಕ ಕಮಿಟ್ಮೆಂಟ್ ಇದೆ ಜನರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಜೊತೆ ಚರ್ಚೆ ಮಾಡಬೇಕು ಅಂದ್ರೆ ಹೇಳಿ ನನ್ನ ಐದು ಜನ ಸ್ನೇಹಿತರನ್ನ ಕರೆದುಕೊಂಡು ಬರ್ತಿನಿ. ಎದರುಕಡೆ ಕುಳಿತು ಚರ್ಚೆ ಮಾಡೋಣ ಯಾರು ವಲಸು, ಕಚಾಡ, ಕೊಚ್ಚೆ ಎಲ್ಲವನ್ನೂ ಚರ್ಚೆ ಮಾಡೋಣ ಎಂದು ಸವಾಲ್ ಹಾಕಿದರು.

20 ವರ್ಷ ಇಬ್ಬರು ಜೊತೆಯಲ್ಲಿ ರಾಜಕಾರಣ ಮಾಡಿದ್ದೇನೆ. ಪಕ್ಷವನ್ನು ಬೆಳಸಬೇಕಾಗಿದ್ದ ಅವರು ನಮನ್ನೆಲ್ಲಾ ಕಳ್ಸಿದ್ರು, ಪಕ್ಷ ನಾವು ಬಿಟ್ವಾ? ಅವರು ಹೇಗೆ ನಡೆದುಕೊಂಡ್ರು ಅನ್ನೋದನ್ನ ಅವರ ಎದರುಗಡೆ ಹೇಳತೀವಿ. ಈ ಎಲ್ಲಾ ಸ್ನೇಹಿತರಿಂದ ಮುಖ್ಯಮಂತ್ರಿ ಆಗಿದ್ದೇನೆ ಅಂತನು ಮಾತನಾಡಿದ್ದಾರೆ. ಕರಾಳ ದಿನ ಅಂತನಾ? ಅಷ್ಟು ದಿನ ನಾವು ಕೊಳಚೆ ಆಗಿದ್ವಾ? 20 ವರ್ಷ ಕೊಳಚೆ ಹೊಳಗೆ ಹೇಗಿದ್ರಂತೆ? ಇತಿಹಾಸ ದೊಡ್ಡ ಪುರಾಣ, ಅವರ ಎದುರುಗಡೆ ಹೇಳುತ್ತೇನೆ ಎಂದರು.

ಕುಮಾರಸ್ವಾಮಿ ಅವರದು ಬೇಕಾದಷ್ಟು ಇತಿಹಾಸ ಇದೆ ಅಸೆಂಬ್ಲಿಯಲ್ಲಿ ಚರ್ಚೆಯಾದ್ರೆ ಸೂಕ್ತ. ಕೇಂದ್ರ ಮಂತ್ರಿಯಾಗಿ ಉನ್ನತಮಟ್ಟಕ್ಕೆ ಹೋಗಿದ್ದಾರೆ. ಚರ್ಚೆ ಅವಶ್ಯಕತೆ ಇದ್ರೆ ಆಹ್ವಾನ ಕೊಡುತ್ತೇನೆ ವೇದಿಕೆ ಸಿದ್ಧ ಮಾಡಲಿ, ಎಲ್ಲಾದರೂ ಚರ್ಚೆಗೆ ನಾನು ಬರ್ತೇನೆ. ನಾನು ಹಿಟ್ ಅಂಡ್ ರನ್ ತರ ಎಷ್ಟು ಬೇಕಾದ್ರ ಹೇಳಬಹುದು. ಇತಿಹಾಸ ಎಲ್ಲವೂ ನನ್ನ ತಲೆಯಲ್ಲೆ ಇದೆ, ಬೇಕಾದರೆ ಬುಕ್ ಬರೆಯಬಲ್ಲೆ. ಕ್ಷೇತ್ರದ ಮತದಾರರ ಗೌರವ ಕಾಪಾಡುವುದು ನನ್ನ ಧರ್ಮ, ಕುಮಾರಸ್ವಾಮಿ ಅವರ ಗೌರವ ಕಳಿಯೋಕೆ ನಾನು ರೆಡಿ ಇಲ್ಲಎಂದು ಹೆಚ್ಡಿಕೆ ವಿರುದ್ದ ಸಚಿವ ಚಲುವರಾಯಸ್ವಾಮಿ ಕಿಡಿ ಕಾಡಿದರು.

By Veeresh

Leave a Reply

Your email address will not be published. Required fields are marked *

Verified by MonsterInsights