ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಾದ್ಯಂತ ನಡೆಯುತ್ತಿದ್ದ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಸಿಟಿ ರೌಂಡ್ಸ್ ಹಾಕುವ ಮೂಲಕ ಸಮರ ಸಾರಿದರು.

ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳ ನಂತರ ಅವಳಿನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ರಸ್ತೆ ಹೋಗುವವರು ಪ್ರಶ್ನೆ ಮಾಡುವಂತಹಾ ಪರಿಸ್ಥಿತಿ ಉಂಟಾಗಿತ್ತು.
ಈ ಬೆಳವಣಿಗೆಗಳ ನಂತರ ಅವಳಿ ನಗರಕ್ಕೆ ನೂತನ ಕಮಿಷನರಾಗಿ ಅಧಿಕಾರವಹಿಸಿಕೊಂಡ ಎನ್ ಶಶಿಕುಮಾರವರು. ಅವಳಿನಗರ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ವಿರುದ್ಧ ದಿಟ್ಟ ಹೆಜ್ಜೆ ಇಟ್ಟು, ಪಬ್ಲಿಕ್ ಪ್ರೆಂಡ್ಲಿ ಪೊಲೀಸ್ ವಾತಾವರಣ ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿದ್ದು, ಇದರ ಮುಂದವರೆದ ಭಾಗವಾಗಿ ಧಾರವಾಡದಲ್ಲಿ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಎನ್. ಶಶಿಕುಮಾರ್ರವರು ಸಿಟಿ ರೌಂಡ್ಸ್ ಹಾಕಿದರು.
ನಗರದ ಮಾರುಕಟ್ಟೆ ಪ್ರದೇಶದ ಸ್ವಾಮಿ ವಿವೇಕಾನಂದ ವೃತ ಸೇರಿ ಪ್ರಮು ಬೀದಿಗಳಲ್ಲಿ ರೌಂಡ್ಸ್ ಹಾಕಿದ ಕಮಿಷನರ್‌ಗೆ ಸ್ಥಳೀಯ ಠಾಣೆಯ ಅಧಿಕಾರಿಗಳು ಸಾಥ್ ನೀಡಿದರು. ಕಮಿಷನರ ರೌಂಡ್ಸ್ ಹೊಡೆಯುವ ಮೂಲಕ ಸಮಾಜ ಘಾತುಕ ಶಕ್ತಿಗಳಿಗೆ ಖಡಕ್ ಸಂದೇಶ ರವಾನಿಸಿದರು. ಜತೆಗೆ ರೌಂಡ್ಸ್ ಸಮಯದಲ್ಲಿ ಸಾರ್ವಜನಿಕರೊಂದಿಗೆ ಮಾತಾಡುತ್ತ ಸಮಸ್ಯೆಗಳನ್ನು ಕಮುಷನರ್ ಆಲಿಸಿದರು. ಇನ್ನೂ ಪೊಲೀಸ್ ಕಮಿಷನರವರ ದಿಟ್ಟ ಹೆಜ್ಜೆಗೆ ಪೇಡಾ ನಗರಿ ಧಾರವಾಡ ಜನತೆಯ ಮೆಚ್ಚುಗೆಗೆ ಪತ್ರವಾಗಿದೆ.


