ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಬಳ್ಳಾರಿಯಿಂದ ನೇರವಾಗಿ ಹೊಸಕೆರೆಹಳ್ಳಿ ಅಪಾ ರ್ಟ್‌ಮೆಂಟ್‌ಗೆ ಬುಧವಾರ ರಾತ್ರಿ ಆಗಮಿಸಿದರು. ರಾಜರಾಜೇಶ್ವರಿ ನಗರ ನಿವಾಸಕ್ಕೆ ನಟ ದರ್ಶನ್ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಕಷ್ಟು ಅಭಿಮಾನಿಗಳು ಬುಧವಾರ ಸಂಜೆಯಿಂದಲೇ ನಿವಾಸದ ಬಳಿ ಜಮಾಯಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ನಟ ದರ್ಶನ್ ತನ್ನ ಪತ್ನಿ ಹಾಗೂ ಪುತ್ರ ನೆಲೆಸಿರುವ ಹೊಸಕೆರೆಹಳ್ಳಿ ಅಪಾರ್ಟ್ ಮೆಂಟ್‌ಗೆ ಬಂದರು. ಆಪ್ತ ಧನ್ನೀರ್ ಚಲಾಯಿಸಿದ ಕಾರಿನಲ್ಲಿ ಪತ್ನಿ ವಿಜಯಲಕ್ಷ್ಮಿ ಜತೆಗೆ ದರ್ಶನ್ ಹೊಸಕೆರೆಹಳ್ಳಿಗೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದರು. ಇತ್ತ ರಾಜರಾಜೇಶ್ವರಿನಗರದ ನಿವಾಸದತ್ತ ನೆಚ್ಚಿನ ನಟನ ಮುಖ ದರ್ಶನಕ್ಕೆ ಕಾದು ನಿಂತಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಈ ನಡುವೆ ಕೆಲವು ಅಭಿಮಾನಿಗಳು ರಾಜರಾಜೇಶ್ವರಿ ನಗರ ನಿವಾಸದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿ ದರು. ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್ ಬಳಿ ಕೆಲ ಅಭಿಮಾನಿಗಳು ಹಾಗೂ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಟ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಾರ್ಟ್ ಮೆಂಟ್ ಕಡೆಗೆ ತಿರುಗುತ್ತಿದ್ದಂತೆ ರಸ್ತೆಯ ಎರಡೂ ಕಡೆ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗಿದರು. ಕೆಲವರು ಕಾರಿನ ಹಿಂದೆಯೇ ಡಿ ಬಾಸ್ ಎಂದು ಕೂಗಿಕೊಂಡು ಓಡಿದರು. ಮುನ್ನೆ ಚ್ಚರಿಕಾ ಕ್ರಮವಾಗಿ ಹೊಸಕೆರೆ ಹಳ್ಳಿ ಅಪಾರ್ಟ್ ಮೆಂಟ್ ಬಳಿಯೂ ಪೊಲೀಸರ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದರು. ಆರ್‌ಆರ್‌ನಗರ ನಿವಾಸ ಬಳಿ KSRP ತಂಡವನ್ನು ನಿಯೋಜಿಸಲಾಗಿತ್ತು.
ಕೈಮುಗಿದ ಮನವಿ ಮಾಡಿದ ದರ್ಶನ್ ಪುತ್ರ: ದರ್ಶನ್, ಪತ್ನಿ ವಿಜಯಲಕ್ಷ್ಮಿ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್ ಪ್ರವೇಶಿಸಿದರು. ಆದರೂ ಅಭಿಮಾನಿಗಳು ಬಾಸ್ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿದರು. ಈ ವೇಳೆ ದರ್ಶನ್ ಪುತ್ರ ವಿನೀಶ್, ಅಭಿಮಾನಿಗಳತ್ತ ಕೈ ಮುಗಿದು ಮನೆಗೆ ಹೋಗುವಂತೆ ಮನವಿ ಮಾಡಿದರು. ಮತ್ತೊಂದು ಕಡೆ ಅಭಿಮಾನಿಗಳು ತಡರಾತ್ರಿಯಾದರೂ ಅಪಾರ್ಟ್‌ಮೆಂಟ್ ಬಳಿಯೇ ಘೋಷಣೆ ಕೂಗುತ್ತಾ ನಿಂತಿದ್ದರು. ಈ ವೇಳೆ ಅವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು.