ವಿಜಯಪುರ: ಸಿಂದಗಿ ಪಟ್ಟಣದ ವಿರಕ್ತ ಮಠದ ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್ ಎಂದು ನೋಂದಣಿಯಾಗಿದೆ.
ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂನಲ್ಲಿ ನಂ.11 ಖಾಲಿ ಇತ್ತು. 2018 – 2019 ರಲ್ಲಿ ವಕ್ಫ್ ಬೋರ್ಡ್ ಎಂದು ಸೇರ್ಪಡೆಯಾಗಿದೆ.
ವಕ್ಫ್ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು ಆಸ್ತಿ ವಕ್ಫ್ ಬೋರ್ಡ್ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.