Wednesday, September 10, 2025
26.9 C
Bengaluru
Google search engine
LIVE
ಮನೆ#Exclusive Newsಸಹೋದರಿ ಶರ್ಮಿಳಾ ವಿರುದ್ಧವೇ ಆಸ್ತಿ ಕಬಳಿಕೆ ಕೇಸು ದಾಖಲಿಸಿದ ಜಗನ್‌!

ಸಹೋದರಿ ಶರ್ಮಿಳಾ ವಿರುದ್ಧವೇ ಆಸ್ತಿ ಕಬಳಿಕೆ ಕೇಸು ದಾಖಲಿಸಿದ ಜಗನ್‌!

ಹೈದರಾಬಾದ್‌: ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್, ತಮ್ಮ ಸೋದರಿ, ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ವಿರುದ್ದ ಆಸ್ತಿ ಕಬಳಿಕೆ ಕೇಸ್‌ ದಾಖಲಿಸಿದ್ದಾರೆ. ತಮ್ಮ ಹಾಗೂ ತಮ್ಮ ಪತ್ನಿ ಭಾರತಿ ಹೆಸರಲ್ಲಿದ್ದ, ಸರಸ್ವತಿ ಪವರ್‌ ಮತ್ತು ಇಂಡಸ್ಟ್ರೀಸ್ ನ ಷೇರುಗಳನ್ನು ಶರ್ಮಿಳಾ ಅಕ್ರಮವಾಗಿ ತಮ್ಮ ಹಾಗೂ ತಮ್ಮ ವಿಜಯಮ್ಮ ಅವರ ಹೆಸರಿಗೆ ವರ್ಗಾಯಿಸಿದ್ದಾರೆಂದು ತಾಯಿ ವಿಜಯಮ್ಮ ಆರೋಪಿಸಿ ಜಗನ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದಾರೆ. ನೂರಾರು ಕೋಟಿ ರು. ಮೌಲ್ಯದ ಆಸ್ತಿಯನ್ನು ಒಡಹುಟ್ಟಿದ ಸೋದರಿಗೆ ಉಚಿತವಾಗಿ ವರ್ಗಾಯಿಸುವ ಸಂಬಂಧ 2019ರಲ್ಲಿ ಜಗನ್ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದರು. ಬಳಿಕ ಇಬ್ಬರ ಸಂಬಂಧವೂ ಹದಗೆಟ್ಟು ಸೋದರಿಯಿಂದ ಜಗನ್ ದೂರದೂರವಾಗಿದ್ದರು. ಹೀಗಾಗಿ ಆಸ್ತಿ ಹಸ್ತಾಂತರ ನಿರ್ಧಾರವನ್ನು ಜಗನ್ ಕೈ ಬಿಟ್ಟಿದ್ದರು. ಈ ನಡುವೆ ಕೆಲ ಸಮಯದ ಹಿಂದೆ ಸರಸ್ವತಿ ಪವರ್‌ನ ಆಡಳಿತ ಮಂಡಳಿ ಸದಸ್ಯೆಯೂ ಆಗಿರುವ ಶರ್ಮಿಳಾ ಷೇರು ಪಾಲನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಜಗನ್ ದೂರಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments