Wednesday, January 28, 2026
27.9 C
Bengaluru
Google search engine
LIVE
ಮನೆ#Exclusive NewsTop News2ನೇ ಮಹಡಿಯಿಂದ ಬಿದ್ದು ನರ್ಸ್ ಅನುಮಾನಾಸ್ಪದ ಸಾವು

2ನೇ ಮಹಡಿಯಿಂದ ಬಿದ್ದು ನರ್ಸ್ ಅನುಮಾನಾಸ್ಪದ ಸಾವು

ಚಿತ್ರದುರ್ಗ: 2ನೇ ಮಹಡಿಯಿಂದ ಕೆಳಗೆ ಬಿದ್ದ ಸ್ಟಾಫ್ ನರ್ಸ್ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ದುರ್ಘಟನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಮೂಲದ ನರ್ಸ್ ಇಂದ್ರಮ್ಮ (36) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು.

ನಿನ್ನೆ ಸಂಜೆ ಇಂದ್ರಮ್ಮನ ಸ್ನೇಹಿತೆ ಬೀಗದ ಕೀಯನ್ನು ಮೇಲಿಂದ ಕೆಳಗೆ ಎಸೆದಿದ್ದರು. ಆಗ ಬೀಗದ ಕೀ  ಆಯತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದನ್ನು ಕಟ್ಟಿಗೆಯಿಂದ ತೆರವುಗೊಳಿಸಲು ಮುಂದಾಗಿದ್ದ ಇಂದ್ರಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಆಕೆಯ ತಲೆಗೆ ಬಲವಾದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಅವರನ್ನು ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾರ್ಗಮಧ್ಯೆ ಅಸುನೀಗಿದ್ದಾರೆಂದು, ಸಹೊದ್ಯೋಗಿಗಳು ತಿಳಿಸಿದರು. ಆದರೆ, ಮೃತಳ ಕುಟುಂಬಸ್ಥರು ಮಾತ್ರ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಚಿತ್ರದುರ್ಗ ನಗರ ಠಾಣೆಗೆ ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬೆರಳಚ್ಚು‌ ತಜ್ಞರು ಸೇರಿದಂತೆ ಇನ್ನಿತರೆ ತಂತ್ರಜ್ಞರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments