Thursday, November 20, 2025
19.1 C
Bengaluru
Google search engine
LIVE
ಮನೆ#Exclusive NewsTop Newsನಾನೆಷ್ಟು ಸಂಪಾದಿಸ್ತೀನಿ ಅಂತ ಹೆಂಡ್ತಿ ಕೇಳಲ್ಲ! ಸಂದರ್ಶನವೊಂದರಲ್ಲಿ ಪತ್ನಿ ರಾಧಿಕಾ ತಮ್ಮ ಶಕ್ತಿ ಎಂದ ಯಶ್

ನಾನೆಷ್ಟು ಸಂಪಾದಿಸ್ತೀನಿ ಅಂತ ಹೆಂಡ್ತಿ ಕೇಳಲ್ಲ! ಸಂದರ್ಶನವೊಂದರಲ್ಲಿ ಪತ್ನಿ ರಾಧಿಕಾ ತಮ್ಮ ಶಕ್ತಿ ಎಂದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು ಈ ವೇಳೆ ವೃತ್ತಿ ಜೀವನ ಹಾಗೂ ಖಾಸಗಿ ಜೀವನದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ಹಾಗೂ ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

ನಟ ಯಶ್ ಅವರು ಅಭಿಮಾನಿಗಳಿಂದ ಪ್ರೀತಿಯಿಂದ ರಾಕಿಂಗ್ ಸ್ಟಾರ್ ಎಂದು ಕರೆಯಲ್ಪಡುತ್ತಾರೆ. ಅವರು ಸ್ಯಾಂಡಲ್​ವುಡ್ ನಟಿ ರಾಧಿಕಾ ಪಂಡಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಈ ಜೋಡಿಗೆ ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಐರಾ ಯಶ್ ಎಂಬ ಮಗಳು ಹಾಗೂ ಯಥರ್ವ್ ಯಶ್ ಎನ್ನುವ ಮಕ್ಕಳಿಗೆ ಈ ಸ್ಯಾಂಡಲ್​ವುಡ್ ಜೋಡಿ ಪೋಷಕರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೋಸ್ಟ್ ಲವ್ಲೀ ಕಪಲ್ ಎಂದು ಬಂದಾಗ ಯಶ್-ರಾಧಿಕಾ ಅವರು ಹೆಸರು ಮಿಸ್ ಆಗೋದೆ ಇಲ್ಲ. ಇವರು ಕನ್ನಡ ಚಿತ್ರರಂಗದ ಅತ್ಯಂತ ಮುದ್ದಿನ ಜೋಡಿ. ನಟ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದಾಗ ತಮ್ಮ ಪತ್ನಿ ರಾಧಿಕಾ ಪಂಡಿತ್ ತಮ್ಮ ಶಕ್ತಿ ಎಂದು ಹೇಳಿದರು. ನಟ ಪತ್ನಿ ರಾಧಿಕಾ ಅವರು ತಮ್ಮ ನೆಚ್ಚಿನ ಗೆಳತಿ ಎನ್ನುವುದನ್ನು ರಿವೀಲ್ ಮಾಡಿದ್ದು ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಹೇಳಿದರು. ಯಾವುದೇ ಸಿನಿಮಾ ಮಾಡಿದರು ಆ ಸಿನಿಮಾದಿಂದ ತಾನೆಷ್ಟು ಸಂಪಾದಿಸಿದ್ದೇನು ಎಂದು ಪತ್ನಿ ರಾಧಿಕಾ ಪಂಡಿತ್ ಎಂದೂ ಕೇಳುವುದಿಲ್ಲ ಎಂದು ಯಶ್ ಅವರು ರಿವೀಲ್ ಮಾಡಿದ್ದಾರೆ.

ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಪತ್ನಿ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಕಳೆದ ಕೆಲವೊಂದು ವರ್ಷಗಳು ಬಹಳಷ್ಟು ಕ್ರೇಜಿಯಾಗಿದ್ದವು. ನಾನು ನನ್ನ ಸಂಗಾತಿಯನ್ನು ಪಡೆಯಲು ತುಂಬಾ ಅದೃಷ್ಟ ಮಾಡಿದ್ದೇನೆ. ರಾಧಿಕಾ ನನ್ನ ಶಕ್ತಿ ಎಂದು ನಟ ಹೇಳಿದ್ದಾರೆ.

ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಪತ್ನಿ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಕಳೆದ ಕೆಲವೊಂದು ವರ್ಷಗಳು ಬಹಳಷ್ಟು ಕ್ರೇಜಿಯಾಗಿದ್ದವು. ನಾನು ನನ್ನ ಸಂಗಾತಿಯನ್ನು ಪಡೆಯಲು ತುಂಬಾ ಅದೃಷ್ಟ ಮಾಡಿದ್ದೇನೆ. ರಾಧಿಕಾ ನನ್ನ ಶಕ್ತಿ ಎಂದು ನಟ ಹೇಳಿದ್ದಾರೆ.

ಯಾವುದೇ ಸಿನಿಮಾ ಮಾಡಿದರು ಆ ಸಿನಿಮಾದಿಂದ ನನಗೆ ಏನು ಸಿಕ್ಕಿತು? ಎಷ್ಟು ಸಂಪಾದಿಸಿದೆ ಎಂದು ಕೇಳದ ಏಕೈಕ ವ್ಯಕ್ತಿ ಎಂದರೆ ಅದು ರಾಧಿಕಾ ಪಂಡಿತ್ ಎಂದು ಯಶ್ ತಿಳಿಸಿದ್ದಾರೆ. ಆ ಸಿನಿಮಾ ಆಯ್ಕೆ ಮಾಡಿದ್ದು ಒಳ್ಳೆಯ ಆಯ್ಕೆಯೋ ಅಥವಾ ತಪ್ಪಾದ ಆಯ್ಕೆಯಾಗಿತ್ತೋ ಎಂದು ಕೂಡಾ ರಾಧಿಕಾ ಅವರು ಕೇಳುವುದಿಲ್ಲ ಎಂದು ನಟ ರಿವೀಲ್ ಮಾಡಿದರು. ರಾಧಿಕಾ ಪಂಡಿತ್ ನೀನು ಖುಷಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾರೆ. ಇದು ತುಂಬಾ ಒಳ್ಳೆಯ ಗುಣ ಹಾಗೂ ಇದುವೇ ಸತ್ಯ. ಅವಳು ಕೇಳೋ ಒಂದೇ ವಿಚಾರ ಅಂದರೆ ಅದು ಸಮಯ ಹಾಗೂ ಕಾಳಜಿ. ಅದನ್ನು ನೀಡುವುದು ಕೂಡಾ ನನಗೆ ತುಂಬಾ ಕಷ್ಟವಾಗಿರುತ್ತದೆ ಎಂದು ಯಶ್ ಹೇಳಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಇಂಡಸ್ಟ್ರಿಯಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments