Thursday, September 11, 2025
25.8 C
Bengaluru
Google search engine
LIVE
ಮನೆ#Exclusive Newsನಾನು ಕಲೈಂಜರ್ ಮೊಮ್ಮಗ, ಕ್ಷಮೆ ಕೇಳುವುದಿಲ್ಲ : ಉದಯನಿಧಿ ಸ್ಟಾಲಿನ್

ನಾನು ಕಲೈಂಜರ್ ಮೊಮ್ಮಗ, ಕ್ಷಮೆ ಕೇಳುವುದಿಲ್ಲ : ಉದಯನಿಧಿ ಸ್ಟಾಲಿನ್

ಚೆನ್ನೈ: ಸನಾತನ ಧರ್ಮ ಎಂಬುದು ಡೆಂಘೀ ಮತ್ತು ಮಲೇರಿಯಾ ಇದ್ದಂತೆ. ಅದನ್ನು ವಿರೋಧಿಸುವುದಲ್ಲ. ಬದಲಾಗಿ ನಿರ್ಮೂಲನೆ ಮಾಡಬೇಕು’ ಎಂದು ಕಳೆದ ವರ್ಷ ತಾವು ನೀಡಿದ್ದ ವಿವಾದಿತ ಹೇಳಿಕೆ ಬಗ್ಗೆ ಕ್ಷಮೆ ಕೇಳಲ್ಲ ಎಂದು ತಮಿಳು” ನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಉದಯನಿಧಿ ಸ್ಟಾಲಿನ್  ಹೇಳಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಉದಯನಿಧಿ, ‘ಸನಾತನ ಧರ್ಮ ಮಹಿಳೆಯರ ಕುರಿತು ದಮನಕಾರಿ ನಿಲುವು ಹೊಂದಿದೆ. ಹೀಗಾಗಿಯೇ ಇದರ ವಿರುದ್ಧ ದ್ರಾವಿಡ ನಾಯಕರಾದ ಪೆರಿಯಾರ್, ಅಣ್ಣದೊರೈ, ಕರುಣಾನಿಧಿ ಅವರಂಥ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ನಾನು ಅದೇ ಮಾತುಗಳನ್ನು ಪುನರುಚ್ಚಾರ ಮಾಡಿದ್ದೆ. ಆದರ ನನ್ನ ಮಾತುಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗಿತ್ತು.’ ಎಂದರು. ತಮಿಳುನಾಡು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗ ಳಲ್ಲೂ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲೆಲ್ಲಾ ನನ್ನ ಕ್ಷಮೆಗೆ ಆಗ್ರಹಿಸಲಾಗಿದೆ. ಆದರೆ ನಾನು ಕಲೈನಾರ್ (ಕರುಣಾನಿಧಿ) ಅವರ ಮೊಮ್ಮಗ. ಯಾವುದೇ ಕಾರಣಕ್ಕೂ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸುವುದಿಲ್ಲ. ಎಲ್ಲಾ ಪ್ರಕರಣಗಳನ್ನೂ ಎದುರಿಸಲು ನಾನು ಸಿದ್ದ’ ಎಂದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments