Friday, September 12, 2025
20.8 C
Bengaluru
Google search engine
LIVE
ಮನೆ#Exclusive Newsಹಿಂದೂ ಹೆಸರಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ 14 ಜನ ಪಾಕಿಸ್ತಾನಿಗಳು!

ಹಿಂದೂ ಹೆಸರಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ 14 ಜನ ಪಾಕಿಸ್ತಾನಿಗಳು!

ಆನೇಕಲ್: ಇತ್ತೀಚಿಗಷ್ಟೇ ಜಿಗಣಿ ಠಾಣೆ ಪೊಲೀಸರು ಪಾಕ್ ಮೂಲದ ದಂಪತಿಯನ್ನು ಬಂಧಿಸಿದ್ದ ಬೆನ್ನಲ್ಲೇ ರಾಜ್ಯದ ಹಲವೆಡೆ ಹಿಂದೂ ಹೆಸರಲ್ಲಿ ಬೀಡುಬಿಟ್ಟಿರುವ ಪಾಕಿಸ್ಥಾನೀಯರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿ ಮತ್ತೆ 14 ಮಂದಿಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಪಾಕ್ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪಾಕ್ ಪ್ರಜೆಗಳಿಗೆ ಆರ್ಥಿಕ ಸಹಾಯ ಮತ್ತು ಅಕ್ರಮ ದಾಖಲೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದ ಕಿಂಗ್‌ಪಿನ್ ಪರ್ವೇಜ್‌ನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಆತನ ಮಾಹಿತಿ ಮೇಲೆ ಹೆಚ್ಚಿನ ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗಿತ್ತು.

ಚೆನ್ನೈ, ಜಿಗಣಿ ಮತ್ತು ಬೆಂಗಳೂರಿನ ಪೀಣ್ಯ ಸೇರಿದಂತೆ 22 ಮಂದಿ ಪಾಕ್ ಪ್ರಜೆಗಳನ್ನು ಇದುವರೆಗೆ ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೆಹದಿ ಫೌಂಡೇಶನ್ ಧರ್ಮಗುರು ಯೂನಸ್ ಅಲ್ಲೊರ್ ಧರ್ಮ ಪ್ರವಚನಗಳನ್ನು ಪ್ರಚಾರ ಮಾಡಲು ನಿಯೋಜಿಸಲ್ಪಟ್ಟಿದ್ದರು ಎನ್ನಲಾಗಿದೆ. 10 ಮಂದಿಗೆ ನ್ಯಾಯಾಂಗ ಬಂಧನ ಸಫೀಕ್ ಉರ್ ರೆಹಮಾನ್, ಸೈಫ್ ಅಲಿ, ಸಲೀಂ ಖಾನ್, ಫರಾಜ್ ಅಹ್ಮದ್, ಮೆಹನೂರ್, ರುಕ್ಸಾನಾ, ಹಮೀದಾ, ನುಸ್ರತ್, ನೈಜೀನಾ, ಫರ್ಜಾನಾ, ನಿಸ್ಸಾರ್ ಅಹ್ಮದ್, ಇರ್ಮಾಮ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಲಾಗಿದೆ. ಬಂಧಿತ 14 ಮಂದಿಯಲ್ಲಿ ನಿಸಾರ್ ಅಹಮದ್, ಇರ್ಮಾಮ್‌ರನ್ನು ಎಫ್‌ಆರ್‌ಒ (ಫಾರಿನರ್ಸ್ ರಿಜಿಸ್ಟ್ರೇಷನ್ ಆಫೀಸ್) ವಶಕ್ಕೆ ನೀಡಲಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮೊಹಮ್ಮದ್ ಹನೀಫ್, ರುಬಿನಾ ಹನೀಫ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಷ್ಟು ಬಂಧನ ಸಾಧ್ಯತೆ ಚೆನ್ನೈಯಲ್ಲಿದ್ದ ನಾಲ್ವರು ಪಾಕ್ ಪ್ರಜೆಗಳ ಬಂಧನದ ಬಳಿಕ ಮೆಹದಿ ಫೌಂಡೇಶನ್ ಮೂಲಕ ಪಾಕ್ ಪ್ರಜೆಗಳು ಅಕ್ರಮವಾಗಿ ದೇಶದ ಒಳಗೆ ನುಸುಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭಾರತದ ನಾನಾ ಕಡೆ ವಾಸವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ತನಿಖಾ ಹಂತ ದಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಪಾಕ್ ಪ್ರಜೆಗಳು ಬಂಧನ ಆಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಏನಿದು ಪ್ರಕರಣ? -ರಹಸ್ಯವಾಗಿ ನೆಲೆಸಿರುವ ಪಾಕಿಗಳು -ಕಿಂಗ್‌ಪಿನ್ ಪರ್ವೇಜ್ ಮಾಹಿತಿ ಮೇಲೆ ಹಲವರ ಸೆರೆ -ಚೆನ್ನೈ, ಜಿಗಣಿ, ಪೀಣ್ಯದಲ್ಲಿ ಮತ್ತಷ್ಟು ಮಂದಿಯ ಬಂಧನ -ವಿವಿಧ ರಾಜ್ಯಗಳಿಗೆ ತನಿಖೆಗಾಗಿ ಪೊಲೀಸ್ ತಂಡಗಳ ರವಾನೆ

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments