ಹರಿಯಾಣ ವಿಧಾನಸಭೆಗೆ ನಡೆದಿದ್ದ ಚುನಾವಣೆ ಫಲಿತಾಂಶ ಬಾಕಿ ಇದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಕಂಡು ಬಂದಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೂ ಈಗ ಬಿಜೆಪಿ ಕೆಲವು ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದು ಮುನ್ನಡೆ ಕಾಯ್ದುಕೊಂಡಿದೆ.
ಚಂಡೀಗಢ: ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ.. ಎರಡು ಪಕ್ಷದವರ ಸಂಭ್ರಮ, ಕೊನೆಗೆ ಯಾರಿಗೆ ಅಧಿಕಾರದ ಚುಕ್ಕಾಣಿ ಎನ್ನುವ ಕ್ಷಣ ಕ್ಷಣದ ಕುತೂಹಲ ಇದು ಹರಿಯಾಣ ರಾಜ್ಯ ವಿಧಾನಸಭೆಗೆ ನಡೆದಿರುವ ಚುನಾವಣೆಯ ಮತ ಎಣಿಕೆಯ ಹಾವು ಏಣಿಯಾಟದಂತಹ ಸನ್ನಿವೇಶ. ಇನ್ನೂ ಅಂತಿಮ ಫಲಿತಾಂಶ ಬರುವುದು ಬಾಕಿ ಇರುವ ನಡುವೆ ಈ ಕ್ಷಣದ ಮಾಹಿತಿಯಂತೆ ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಹಂತಕ್ಕೆ ಬಂದಿದೆ. ಒಟ್ಟು 90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 46 ರಲ್ಲಿ ಮುನ್ನಡೆ ಕಂಡು ಕಂಡುಕೊಂಡರೆ, ಕಾಂಗ್ರೆಸ್ 36 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ. ಬಹುತೇಕ ಎರಡು ಗಂಟೆ ಕಾಲ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಹಲವು ಕ್ಷೇತ್ರದಲ್ಲಿ ಹಿನ್ನಡೆ ಕಂಡಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಹರಿಯಾಣದಲ್ಲಿ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿದೆ. ಆದರೂ ಅಂತಿಮ ಫಲಿತಾಂಶದ ನಂತರವೇ ಚಿತ್ರಣ ಸಿಗಲಿದೆ.