BMTC ಬಸ್ ನಲ್ಲಿ ಸೈಕೋ ಯುವಕನ ಅಟ್ಟಹಾಸ .ಬಸ್ ನಲ್ಲಿ ಆಟಾಟೋಪ ಪ್ರದರ್ಶಿಸಿದ ಪ್ರಯಾಣಿಕ.ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ಗೆ ಚಾಕು ಹಾಕಿದ ಜಾರ್ಖಂಡ್ ಯುವಕ .ಬಿಎಂಟಿಸಿ ವೋಲ್ವೋ ಬಸ್ ನಲ್ಲಿ ನಡೆಯಿತು ಕೊಲೆಗೆ ಯತ್ನ.
ಬಸ್ ನಲ್ಲಿ ಹುಚ್ಚನಂತೆ ವರ್ತಿಸಿ ಪ್ರಯಾಣಿಕರನ್ನ ಭಯಭೀತಗೊಳಿಸಿದ ಹುಡುಗ.ಸುತ್ತಿಗೆಯಿಂದ ಬಸ್ ಗಾಜು ಪುಡಿ ಪುಡಿ ಮಾಡಿ ದುರ್ವತನೆ. ಬಿಎಂಟಿಸಿ ಬಸ್ ನಲ್ಲಿ ರೌಡಿಯಂತೆ ವರ್ತಿಸಿದ ಯುವಕನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಗಿಲ ಬಳಿ ನಿಲ್ಲಬೇಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಅಟ್ಯಾಕ್ ಮಾಡಿದ .ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದಲ್ಲಿ ಘಟನೆ.ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಗೆ ಚಾಕು ಇರಿತ.ಡೋರ್ ಸಮೀಪ ನಿಂತಿದ್ದ ಯುವಕನಿಗೆ ಒಳಹೋಗು ಎಂದಿದ್ದಕ್ಕೆ ಚಾಕು ಇರಿತ.ಸೈಕೋ ಯುವಕನ ಆಟಕ್ಕೆ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು.


