Saturday, September 13, 2025
21.6 C
Bengaluru
Google search engine
LIVE
ಮನೆ#Exclusive NewsTop Newsಇ-ಖಾತಾ ವಿತರಣಾ ವ್ಯವಸ್ಥೆಗೆ ಬಿಬಿಎಂಪಿ ಪರೀಕ್ಷಾರ್ಥ ಆರಂಭ

ಇ-ಖಾತಾ ವಿತರಣಾ ವ್ಯವಸ್ಥೆಗೆ ಬಿಬಿಎಂಪಿ ಪರೀಕ್ಷಾರ್ಥ ಆರಂಭ

ಬೆಂಗಳೂರು: ನಗರವಾಸಿಗಳು ತಮ್ಮ ಆಸ್ತಿಯ ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಫೇಸ್‌ಲೆಸ್‌, ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಮಾಡುವುದಾಗಿ ಮಂಗಳವಾರ ಪರೀಕ್ಷಾರ್ಥವಾಗಿ ಚಾಲನೆ ನೀಡಿದೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಇ–ಖಾತಾ ವ್ಯವಸ್ಥೆಯನ್ನು ಪ್ರಾರಂಭಿಸುವ ಸಲಾಗುತ್ತಿದ್ದು, ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕರಡು ಇ-ಖಾತಾವನ್ನು ಆನ್‌ಲೈನ್‌ www.bbmpeaasthi.karnataka.gov.inನಲ್ಲಿ ರಚಿಸಲಾಗಿದೆ. ನಾಗರಿಕರು ತಮ್ಮಲಿರುವ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಅಂತಿಮ ಇ-ಖಾತಾವನ್ನು ಪಡೆಯಲು ಆಧಾರ್ ಇ-ಕೆವೈಸಿ, ಸ್ವತ್ತಿನ ಜಿಪಿಎಸ್ ದತ್ತಾಂಶ, ಛಾಯಾಚಿತ್ರ, ಸ್ವತ್ತಿನ ನೋಂದಾಯಿತ ದಸ್ತಾವೇಜು, 2004ರ ಏಪ್ರಿಲ್‌ 1ರಿಂದ ಈವರೆಗಿನ ಋಣಭಾರ ಪ್ರಮಾಣಪತ್ರ, ಬೆಸ್ಕಾಂ ಮೀಟರ್ ಸಂಖ್ಯೆ, ಎ-ಖಾತಾ ಎಂದು ದೃಢೀಕರಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ನಾಗರಿಕರು ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಿಯಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿ ಮಾಡಬಹುದು. ಸ್ವತ್ತಿನ ಮಾಲೀಕರು ಅಂತಿಮ ಇ–ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಏಳು ದಿನದಲ್ಲಿ ಸಲ್ಲಿಸಬಹುದಾಗಿದೆ. ಅಂತಿಮ ಇ-ಖಾತಾವನ್ನು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ವಿತರಿಸಲಾಗುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments