Wednesday, September 10, 2025
28.3 C
Bengaluru
Google search engine
LIVE
ಮನೆ#Exclusive Newsಪಳನಿ ದೇವಾಲಯದ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು:ತಮಿಳು ಚಿತ್ರ ನಿರ್ದೇಶಕ ಮೋಹನ್...

ಪಳನಿ ದೇವಾಲಯದ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು:ತಮಿಳು ಚಿತ್ರ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣದ ಕುರಿತ ವಿವಾದ ಇನ್ನೂ ಹಸಿರಾಗಿರುವಂತೆಯೇ ಅತ್ತ ತಮಿಳುನಾಡಿನ ಖ್ಯಾತ ಪಳನಿ ದೇವಾಲಯ ಪ್ರಸಾದವೂ ಕಲಬೆರಕೆಯಾಗಿದೆ ಎಂದು ಖ್ಯಾತ ತಮಿಳು ಚಿತ್ರ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಆರೋಪಿಸಿದ್ದು, ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದು, ತಮಿಳುನಾಡಿನ ಖ್ಯಾತ ಪಳನಿ ದೇವಾಲಯದ ಪ್ರಸಾದದ ಕುರಿತಾದ ಹೇಳಿಕೆಯಿಂದಾಗಿ ಮಹೇಶ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಪ್ರಸಾದದಲ್ಲಿ ಮಕ್ಕಳಾಗದೇ ಇರಲು ಬಳಸುವ ಔಷದಿ ಮಿಶ್ರಣ

ಇನ್ನು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ಜಿ, ‘ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು, ಅಲ್ಲಿ ಕೆಲಸ ಮಾಡುವವರೇ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು. ಇದರ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರೇ ಹೇಳಿಕೊಂಡಿರುವ ವಿಷಯ ಇದು’ ಎಂದು ಹೇಳಿದ್ದರು.

ಬಂಧನ ಖಂಡಿಸಿದ ಬಿಜೆಪಿ

ಇದೇ ವೇಳೆ, ಮೋಹನ್ ಜಿ ಬಂಧನವನ್ನು ಖಂಡಿಸಿದ ಬಿಜೆಪಿ ನಾಯಕ ಅಶ್ವಥಾಮನ್, ‘ಇದು ಅಸಂವಿಧಾನಿಕ. ಬಂಧನ ಕಾರಣದ ಬಗ್ಗೆ ನಿರ್ದೇಶಕರ ಕುಟುಂಬಕ್ಕೂ ತಿಳಿಸಲಾಗಿಲ್ಲ. ಕಾರಣ ಏನು ಮತ್ತು ಪ್ರಕರಣ ಏನು ಎಂಬ ಬಗ್ಗೆ ಕುಟುಂಬಕ್ಕೆ ಯಾವುದೇ ಔಪಚಾರಿಕ ಮಾಹಿತಿ ನೀಡಲಾಗಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments