ಬೆಳಗಾವಿ(ನಿಪ್ಪಾಣಿ ):ಗಣೇಶ ವಿಸರ್ಜನೆಯ ವೇಳೆ ವೇದಗಂಗಾ ನದಿಯಲ್ಲಿ ಯುವಕ ನಾಪತ್ತೆಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ಘಟನೆ ನಡೆದಿದೆ.ನಿಕೇಶ ಬೋಯರ್ ಎಂಬ ಯುವಕ ನೀರುಪಾಲಾಗಿದ್ದಾನೆ.ಯಮಗರ್ಣಿ ಗ್ರಾಮದ ಬಳಿಯ ವೇದಗಂಗಾ ನದಿಯಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದುರ್ಘಟನೆ.ಯುವಕನ ಮೃತದೇಹ ಪತ್ತೆಗಾಗಿ NDRF, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ.NDRF ತಂಡದಿಂದ ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ.ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.