ಜಲಪಾತೋತ್ಸವಕ್ಕೆ ಸಜ್ಜಾದ ಮಂಡ್ಯಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನ ಸಮುದ್ರದ ಜಲಪಾತ. ಇದೇ ಸೇಪ್ಟಂಬರ್ 14 ಹಾಗೂ 15 ರಮದು ನಡೆಯಲಿರುವ ಗಗನ ಚುಕ್ಕಿ ಜಲಪಾತೋತ್ಸವ 2024ರ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ. ಗನಗನ ಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಹಾಗೂ ರ್ಯಾಪರ್ ಚಂದನ್ ಶೆಟ್ಟಿಯ ಸಂಗೀತೋತ್ಸವಸದ ರಸ ಸಂಜೆ ಕಾರ್ಯಮಗಳು ನಡೆಯಲಿವೆ ಎರಡು ದಿನಗಳ ಕಾಲ ಬೆಳಗ್ಗೆ 10.30ರಿಂದ ರಾತ್ರಿ 10.30ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನ ಮಾಡಲಾಗಿದೆ. ಸುಂದರ ಜಲಪಾತೋತ್ಸವ ಕಾರ್ಯಕ್ರಮ ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿ ಆಧ್ಯೆಕ್ಷತೆಯಲ್ಲಿ ನಡೆಯಲಿದ್ದು, ಸಿಎಂ, ಡಿಸಿಎಂ ಹಾಗೂ ಕರ್ನಾಟಕದ ಚತುರ ಕೆಂದ್ರ ಸಚಿವ ಹೆಚ್ಡಿಕೆ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ.