ಬೆಂಗಳೂರು: 3 ವರ್ಷಗಳ ಬಳಿಕ ರಾಜಧಾನಿಯಲ್ಲಿ ಮತ್ತೆ ಸಂಚಾರ ಪೊಲೀಸರ ಟೋಯಿಂಗ್ ವಾಹನಗಳು ಕಾರ್ಯಾಚರಣೆಗಿಳಿದಿದ್ದು, ಗಾಂಧಿನಗರದಲ್ಲಿ ಶುಕ್ರವಾರ ಒಂದೇ ದಿನ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್‌ ಅವರು ಮಾತನಾಡಿ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಟೋಯಿಂಗ್‌ಗೆ ಅನುಮತಿ ಕೊಡಲಾಗಿದೆ ಎಂದರು.

ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್‌ ಬಳಿಕ ಉಪ್ಪಾರಪೇಟೆ ಸಂಚಾರ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ ಆ ರಸ್ತೆಗಳಲ್ಲಿ ನಿಲುಗಡೆ ಮಾಡುವ ವಾಹನಗಳ ತೆರವಿಗೆ ಉಪ್ಪಾರಪೇಟೆ ಸಂಚಾರ ಠಾಣೆಗೆ ಟೋಯಿಂಗ್ ವಾಹನಗಳನ್ನು ಬಿಬಿಎಂಪಿಯೇ ನೀಡಿದೆ. ಹೀಗಾಗಿ ಗಾಂಧಿನಗರ ಸೇರಿದಂತೆ ಉಪ್ಪಾರಪೇಟೆ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಟೋಯಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯ ಗಾಂಧಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವ ವಾಹನಗಳನ್ನ ಟೋಯಿಂಗ್ ಮಾಡುವ ಕೆಲಸಕ್ಕೆ ಮರು ಚಾಲನೆ ನೀಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಫ್ರೀಡ್ಂ ಪಾರ್ಕ್ ಬಳಿ ನಿರ್ಮಾಣವಾದ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನು ಜೂನ್ 20 ರಂದು ಸಾರ್ವಜನಿಕ ಬಳಕೆಗೆ ಮುಕ್ತಿಗೊಳಿಸಲಾಗಿತ್ತು. ಅಗತ್ಯ ಸೌಲಭ್ಯಗಳು ಮಾತ್ರವಲ್ಲದೆ ವಾಹನ ನಿಲುಗಡೆ ಮಾಡುವವರಿಗೆ ನಿಗದಿತ ಸ್ಥಳಕ್ಕೆ ಉಚಿತ ಡ್ರಾಪ್ ಮತ್ತು ಪಿಕ್​ಅಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಆದರೂ ಸಹ ನೂತನ ವ್ಯವಸ್ಥೆಯ ಕಡೆ ಆಸಕ್ತಿ ತೋರದ ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಟೋಯಿಂಗ್ ಮಾಡಿ ದಂಡ ವಿಧಿಸುವ ಕೆಲಸ ಆರಂಭಿಸಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights
Did you find this content engaging?