ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನಿಮಗೂ ಯಾರಾದ್ರೂ ಹೀಗೆ ಸ್ಕ್ಯಾಮರ್ಸ್ಗಳು ಕರೆ ಮಾಡಿದ್ದಾರೆ. ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಬದಲು ಕನ್ನಡದಲ್ಲೆ ಮಾತನಾಡಿ ಸ್ಕ್ಯಾಮರ್ಸ್ಗಳಿಂದ ಬಚ್ಚಾವಾಗಿ
ತಂತ್ರಜ್ಞಾನ ಬೆಳೆದಂತೆ ಸೈಬರ್ ಸ್ಕ್ಯಾಮ್‌ಗಳು ಕೂಡಾ ಹೆಚ್ಚುತ್ತಿವೆ. ಕೆಲಸ ಕೊಡಿಸುವುದಾಗಿ, ಬ್ಯಾಂಕ್‌ನಿಂದ ಕರೆ ಮಾಡಿರುವುದಾಗಿ, ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಡುವುದಾಗಿ ಹಾಗೂ ಹಣ ಡಬಲ್ ಮಾಡುವ ನೆಪ ಹೇಳಿ ವಂಚಕರು ಯಾರ್ಯಾರಿಗೋ ಕರೆ ಮಾಡಿ, ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಹೌದು ಈ ಸ್ಕ್ಯಾಮರ್ಸ್ ಎಂ.ಎನ್.ಸಿ ಕಂಪೆನಿಗಳ ಹೆಚ್.ಆರ್, ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಅದೆಷ್ಟೋ ಜನರಿಗೆ ಪಂಗನಾಮ ಹಾಕಿದ್ದಾರೆ.
ಹೀಗೆ ಕರೆ ಫೋನ್ ಕರೆ ಮಾಡುವ ಇವರುಗಳು ಒಂದಾ ಹಿಂದಿ ಭಾಷೆಯಲ್ಲಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ವ್ಯವಹರಿಸುತ್ತಾರೆ. ಒಂದು ವೇಳೆ ಸ್ಕ್ಯಾಮರ್ಸ್ ನಿಮಗೂ ಕರೆ ಮಾಡಿದ್ರೆ, ಅವರೊಂದಿಗೆ ಹಿಂದಿ, ಇಂಗ್ಲೀಷ್ ಮಾತನಾಡುವ ಬದಲು ನಮ್ಮ ಕನ್ನಡದಲ್ಲಿಯೇ ಮಾತನಾಡಿ, ಇದರಿಂದ ಸುಲಭವಾಗಿ ವಂಚನೆಗಳಿಂದ ಪಾರಾಗಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಅದ್ಭುತವಾದ ಟಿಪ್ಸ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದ ವೇಳೆ ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಕನ್ನಡ ಭಾಷೆ ಬಾರದಿರುವ ಸ್ಕ್ಯಾಮರ್ಸ್‌ಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ವಂಚನೆಗಳಿಂದ ಪಾರಾಗಬಹುದು ಎಂಬುದನ್ನು ಹೇಳಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ಕನ್ನಡಿಗ ದೇವರಾಜ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.