ಬೆಂಗಳೂರು– ಬಿಜೆಪಿ ಮಾತೆತ್ತಿದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಮೇಲೆ ಮುಗಿಬೀಳುತ್ತಾರೆ. ಸಿಎಂ ಐಶಾರಾಮಿ ವಿಮಾನ ಪ್ರಯಾಣ ಮಾಡಿದರಂತೆ..! ಮೋದಿ ಅವರು ಒಡಾಡುವುದಕ್ಕೆ ಎಂಟೂವರೆ ಸಾವಿರ ಕೋಟಿ ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಆ ವಿಮಾನದ ಐಶಾರಾಮಿ ಹೇಗಿದೆ ಎಂದು ಬಿಜೆಪಿಯವರು ತೋರಿಸಲಿ. ಸಿದ್ದರಾಮಯ್ಯ ಅವರ ಪ್ರಯಾಣ ಮಾಡಿದ್ದು ಬಾಡಿಗೆ ವಿಮಾನ. ನಿಮ್ಮ ಪ್ರಕಾರ ಸಿಎಂ ರೈಲಲ್ಲಿ, ಎತ್ತಿನಗಾಡಿ ಅಥವಾ ನಡೆದುಕೊಂಡು ಹೋಗಬೇಕೆ? ಹೇಳಿ. ಅದನ್ನು ನೀವು ಪಾಲನೆ ಮಾಡಬೇಕು.

ವಿಪಕ್ಷ ನಾಯಕ ಆರ್ ಅಶೋಕ್ ಮಾತಿನಲ್ಲಿ ತೂಕವಿಲ್ಲ..!
ಅಶೋಕ್ ಅವರು ವಿರೋಧ ಪಕ್ಷದ ನಾಯಕನಾಗಿ ಮಾತನಾಡುವಾಗ ಅವರ ಮಾತಿನಲ್ಲಿ ತೂಕ ಇರಬೇಕು. ದಿನಬೆಳಗಾದರೆ ಸಣ್ಣಪುಟ್ಟ ವಿಚಾರವಾಗಿ ಮಾಧ್ಯಮಗೋಷ್ಠಿ ಮಾಡುವುದಲ್ಲ. ನಿಮ್ಮ ಮರ್ಯಾದೆ ನೀವೆ ತೆಗೆದುಕೊಳ್ಳುತ್ತಿದ್ದೀರಿ. ಜನರ ಸಮಸ್ಯೆ, ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಲಹೆ ಇದ್ದರೆ ಹೇಳಿ ಎಂದು ಆರ್ ಅಶೋಕ್ಗೆ ತಿವಿದರು. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನ ತಲುಪಿವೆ. ಹಾಗಾಗಿ ಈ ಬಾರಿ ಲೋಕಸಭೆಯಲ್ಲಿ ಗೆಲುವು ನಮ್ಮದೇ, ಬಿಜೆಪಿಯವರು ಮೋದಿಯವರನ್ನ ಮೂರನೇ ಬಾರಿ ಪ್ರಧಾನಿ ಮಾಡಲು ಮೈ ಪರಚಿಕೊಳ್ಳುತ್ತಿದ್ದಾರೆ.