Wednesday, January 28, 2026
27.9 C
Bengaluru
Google search engine
LIVE
ಮನೆ#Exclusive NewsTop Newsಅಧಿಕಾರಿ ವರ್ಗ ಹಾಗೂ ಬ್ರೋಕರ್ಸ್​ಗೆ ಬೆಂಗಳೂರು DC ಶಾಕ್...!

ಅಧಿಕಾರಿ ವರ್ಗ ಹಾಗೂ ಬ್ರೋಕರ್ಸ್​ಗೆ ಬೆಂಗಳೂರು DC ಶಾಕ್…!

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ದಿನೇ ದಿನೇ ಕಳ್ಳಾಟಗಳು ಜೋರಾಗಿಯೇ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕುವರೇ ಇಲ್ಲವಾಗಿದೆ. ಅಗಾಗ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದಾರೆ. ಆದ್ರೂ ಅಧಿಕಾರಿ ವರ್ಗ ಹಾಗೂ ಬ್ರೋಕರ್ ಗಳ ಆಟಾಟೋಪ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರ ಡಿಸಿ ಕೆ.ಎ ದಯಾನಂದ ಮುಂದಾಗಿದ್ದಾರೆ.

ಬ್ರೋಕರ್ ಗಳ ಜೊತೆ ನಂಟು ಹೊಂದಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕಂದಾಯ ಭವನದಲ್ಲಿ ನಿತ್ಯ ಅಧಿಕಾರಿ ವರ್ಗ ಹಾಗೂ ಬ್ರೋಕರ್ ಗಳ ನಡುವೆ ನಿತ್ಯ ವ್ಯವಹಾರ ನಡೆಯುತಿದ್ದ, ಜನ ಬೇಸತ್ತು ಹೋಗಿದ್ದಾರೆ.ಇದನ್ನ ಗಂಭೀರವಾಗಿ ಪರಿಗಣಿಸಿರುವ ಡಿಸಿ ದಯಾನಂದ ಅವರು ಬ್ರೋಕರ್ಸ್ ಜೊತೆ ನಂಟು ಹೊಂದಿದವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಮುಂದಾಗಿದ್ದಾರೆ. ಬ್ರೋಕರ್ ಗಳ ಆಟಕ್ಕೆ ಕಡಿವಾಣ ಹಾಕಲು ಎಫ್ಐಆರ್ ಅಸ್ತ್ರ ಪ್ರಯೋಗಿಸಿದ್ದು, ಇದರಿಂದ ಇನ್ಮೇಲೆ ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಬ್ರೋಕರ್ಗಳಿಗೆ ಕಂಪ್ಲೀಟ್ ಕಡಿವಾಣ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಉತ್ತರ- ದಕ್ಷಿಣ ತಹಶೀಲ್ದರ್, ಹಾಗೂ ಎಸಿ ಕಚೇರಿಯಲ್ಲೂ ಬ್ರೋಕರ್ ಗಳ ಆಟ ಹೆಚ್ಚಾಗಿದೆ. ಕೆಲ ದಿನದ ಹಿಂದೆ ವಿಶೇಷ ತಹಶೀಲ್ದರ್ ನಾಗರಾಜ್, ಕಚೇರಿಯಲ್ಲಿ ನೌಕರರು ಹಾಗೂ ಬ್ರೋಕರ್ ನಡುವೆ ಡೀಲಿಂಗ್ ನಡೆಯುವ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ರು. ಆದ್ರೆ ಕಂದಾಯ ಭವನದಲ್ಲಿ ಬ್ರೋಕರ್ ಗಳು ಹಾಗೂ ಅಧಿಕಾರಿ, ಸಿಬ್ಬಂದಿ ಕಾಟ ಬಗ್ಗೆ ಸಾಲು ಸಾಲು ದೂರುಗಳ ಬಂದ ಬೆನ್ನಲ್ಲೇ ಡಿಸಿ ದಯಾನಂದ ಕಚೇರಿ ಸುತ್ತೋಲೆ ಹೊರಡಿಸಿ,ಇನ್ಮೇಲೆ ಬ್ರೋಕರ್ ಜೊತೆ ವ್ಯವಹಾರ ಮಾಡಿ ಸಿಕ್ಕಿಬಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಅಂತ ಎಚ್ಚರಿಸಿದ್ದಾರೆ. ಜೊತೆಗೆ ನಾಗರೀಕ ಸೇವಾ ನಿಯಮಾವಳಿ- 2021 ರ ನಿಯಮದ ಅನ್ವಯ ಮುನ್ಸೂಚನೆ ಇಲ್ಲದೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದು, ಇದಕ್ಕೆ ಅಸ್ವದ ನೀಡದೆ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಅಂತ ಬೆಂಗಳೂರು ನಗರ ಡಿಸಿ ದಯಾನಂದ ಸೂಚನೆ ನೀಡಿದ್ದಾರೆ..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments