Thursday, November 20, 2025
24.6 C
Bengaluru
Google search engine
LIVE
ಮನೆ#Exclusive NewsTop Newsಮನೆ ನೆಲಸಮ ಆಗೋಯ್ತು, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆ

ಮನೆ ನೆಲಸಮ ಆಗೋಯ್ತು, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆ

ವಯನಾಡು: ʻʻ18 ವರ್ಷದವಳಿದ್ದಾಗ ಒಂದೂವರೆ ವರ್ಷದ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಊರು ಬಿಟ್ಟೆ, ಸ್ವಂತ ಮನೆ ಕಟ್ಟಿದ್ದೆ. ಈಗ ಮನೆ ನೀರಲ್ಲಿ ಕೊಚ್ಚಿ ಹೋಯ್ತು, ಮಕ್ಕಳನ್ನೂ ಹೊತ್ಕೊಂಡು ಹೋಯ್ತು, ಮತ್ತೆ ಅದೇ ಸ್ಥಿತಿಗೆ ಬಂದು ನಿಂತಿದ್ದೇನೆ ಸಾಹೇಬ್ರೆ, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿʼʼ ವಯನಾಡಿನ ಮಪ್ಪಾಡಿಯಲ್ಲಿ ಉಂಟಾದ ಭೂಕುಸಿತದಲ್ಲಿ ಮನೆ ಕಳೆದುಕೊಂಡ ಮೈಸೂರು ಮೂಲದ ಸಂತ್ರಸ್ತೆ ಮಾದೇವಿ ಅವರ ನೋವಿನ ನುಡಿಗಳಿವು.

ಭೂಕುಸಿತದಲ್ಲಿ ಆಶ್ರಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಾದೇವಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ  ಅವರು ದೂರವಾಣಿಯ ಮೂಲಕ ಮಾತುಕತೆ ನಡೆಸಿದರು. ಜೊತೆಗೆ ರಾಜ್ಯ ಸರ್ಕಾರದಿಂದ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು.

ಸಿಎಂ ಕರೆ ಮಾಡುತ್ತಿದ್ದಂತೆ ವೃದ್ಧ ಮಹಿಳೆ ಕಣ್ಣೀರು ಹಾಕಲು ಶುರು ಮಾಡಿದ್ರು. ಊರಲ್ಲಿ ಮಳೆಯಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ ಅಂತ ಊರು ಬಿಟ್ಟೆ. 18 ವರ್ಷದವಳಿದ್ದಾಗಲೇ ಒಂದೂವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು, ನೀಲಗಿರಿ ಕಾಫಿ ತೋಟಕ್ಕೆ ಬಂದು ಕೆಲಸ ಮಾಡಲು ಶುರು ಮಾಡಿದೆ. ಈಗ ಎಲ್ಲವನ್ನೂ ಕಳೆದುಕೊಂಡು ಮತ್ತೆ ಅದೇ ಸ್ಥಿತಿಗೆ ಬಂದಿದ್ದೇನೆ. ನನಗೀಗ 70 ವರ್ಷವಾಗಿದೆ, ಇನ್ನು ದುಡಿಯಲು ಶಕ್ತಿಯಿಲ್ಲ. ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆ ಎಂದು ಅಂಗಲಾಚಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments