Thursday, January 29, 2026
20.3 C
Bengaluru
Google search engine
LIVE
ಮನೆ#Exclusive NewsTop Newsಡಿಕೆಶಿ ಭಾಷಣದ ವೇಳೆ ‘ಡಿ ಬಾಸ್.. ಎಂದು ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು

ಡಿಕೆಶಿ ಭಾಷಣದ ವೇಳೆ ‘ಡಿ ಬಾಸ್.. ಎಂದು ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು

ರಾಮನಗರ: ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಭಾಷಣ ಮಾಡುವಾಗ ದರ್ಶನ್ ಅಭಿಮಾನಿಗಳು ‘ಡಿ ಬಾಸ್.. ಡಿ ಬಾಸ್’ ಎಂದು ಘೋಷಣೆ ಕೂಗಿರುವ ಪ್ರಸಂಗ ನಡೆದಿದೆ.

ಕಾರ್ಯಕ್ರಮದಲ್ಲಿ ದರ್ಶನ್ ಕುರಿತು ಮಾತನಾಡಿದ ಡಿಕೆಶಿ, ಅದರ ಬಗ್ಗೆ ನಾಳೆ ಮಾತನಾಡ್ತೀನಿ. ದರ್ಶನ್ (Darshan) ಅವರ ಪತ್ನಿ ಭೇಟಿ ಮಾಡೋಕೆ ಸಮಯ ಕೇಳಿದ್ದಾರೆ. ನಾಳೆ ಬೆಳಗ್ಗೆ ಅವರನ್ನ ಭೇಟಿ ಮಾಡ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ಏನಾದರೂ ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನ ಮಾಡ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಯಾರಿಗೇ ಆಗಿದ್ದರೂ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣ. ನೊಂದವರೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದು ಆಶಿಸಿದರು.

ಉತ್ಸವ ಕುರಿತು ಮಾತನಾಡಿ, ಅಧಿವೇಶನ ಇದ್ದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತಕೊಟ್ಟು ಇಕ್ಬಾಲ್ ಗೆಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮ ಸೇವೆ ಮಾಡಲು, ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದೀರಿ. ಡಿಕೆ ಸುರೇಶ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿ ನಾನು ನಿಮ್ಮ ಸೇವೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments