Friday, September 12, 2025
26.7 C
Bengaluru
Google search engine
LIVE
ಮನೆಮನರಂಜನೆSalaar movie ಸಲಾರ್ ಸಿನಿಮಾದಲ್ಲಿ ಹೈಲೈಟ್ಸ್ ಆದ ಈ ಪಾತ್ರ ಮಾಡಿದವರು ಯಾರು..??

Salaar movie ಸಲಾರ್ ಸಿನಿಮಾದಲ್ಲಿ ಹೈಲೈಟ್ಸ್ ಆದ ಈ ಪಾತ್ರ ಮಾಡಿದವರು ಯಾರು..??

Freedom tv desk :

Salaar movie : ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ದಾಖಲೆಯ ಕಲೆಕ್ಷನ್ ಮೂಲಕ ಸಿನಿಮಾ ಅಬ್ಬರಿಸುತ್ತಿದೆ. ಸಲಾರ್ ಚಿತ್ರ ಭಾರತದ ಜೊತೆಗೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಭಾರತೀಯ ಗಲ್ಲಾ ಪೆಟ್ಟಿಗೆಯಲ್ಲಿ ಸಲಾರ್ ಸಿನಿಮಾ ಮೂರು ದಿನಕ್ಕೆ 200 ಕೋಟಿ ರೂಪಾಯಿಗಳಿಸಿದೆ. ವಿಶ್ವದಾದ್ಯಂತ ಈ ಚಿತ್ರ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಸೈಯದ್ ಫರ್ಜಾನಾ ಪಾತ್ರ ಗಮನ ಸೆಳೆದಿದೆ.

ಸಲಾರ್ ಸಿನಿಮಾದಲ್ಲಿ ಕಾಟೆರಮ್ಮ ದೇವಿಯ ಎದುರು ಫೈಟ್  ಸೀಕ್ವೆನ್ಸ್ ಎಲ್ಲರಿಗೂ ಇಷ್ಟವಾಗಲಿದೆ. ಈ ದೃಶ್ಯದಲ್ಲಿ ಸುರಭಿ ಎಂಬ ಹುಡುಗಿಗಾಗಿ ಕಥಾ ನಾಯಕ ಹೋರಾಡುತ್ತಾನೆ. ಆ ಫೈಟ್ ಸಿನಿಮಾದ ಹೈಲೈಟ್ಸ್ ಆಯಿತು. ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಸೈಯದ್.

ಸೈಯದ್ ಫರ್ಜಾನಾಗೆ ಒಳ್ಳೆಯ ಕ್ರೇಜ್ ಸಿಕ್ಕಿದೆ. ಝಾನ್ಸಿ ವೆಬ್ ಸರಣಿಯಲ್ಲಿ ಫರ್ಜಾನಾ ಕಾಣಿಸಿಕೊಂಡಿದ್ದರು. ಸಲಾರ್ ಚಿತ್ರದಲ್ಲಿ ಕಾಟೇರಮ್ಮ ಎದುರು ನಡೆಯುವ ಹೊಡೆದಾಟದ ದೃಶ್ಯದಲ್ಲಿ ಸೈಯದ್ ಹೈಲೈಟ್ಸ್ ಆಗಿದ್ದರು. ಅವರಿಗೆ ಬೇಡಿಕೆ ಹೆಚ್ಚಿದೆ. ಬಾಲ ಕಲಾವಿದೆಯಾಗಿ ಅವರು ಗಮನ ಸೆಳೆದಿದ್ದಾರೆ.

ಸುರಭಿ ಆಡಿಷನ್​ಗೆ ಆಯ್ಕೆ ಅದ ನಂತರ ಇದು ಸಣ್ಣ ಪಅತ್ರ ಎಂದು ಭಾವಿಸಿದ್ದರು. ಆದರೆ ಸೆಟ್​ಗೆ ಹೋದಾಗ ಅವರಿಗೆ ಈ ಪಾತ್ರದ ತೂಕ ಗೊತ್ತಾಯಿತು. ನನ್ನ ಪಾತ್ರ ಸಣ್ಣದು ಎಂದುಕೊಂಡಿದ್ದೆ, ಆದರೆ, ಪ್ರಭಾಸ್ ಅವರೊಂದಿಗಿನ ತೆರೆ ಹಂಚಿಕೊಳ್ಳುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನನ್ನ ಅಭಿನಯವನ್ನು ಶ್ಲಾಘಿಸಿದರು. ಥಿಯೇಟರ್​ನಲ್ಲಿ ಜನರಿಗೆ ಈ ದೃಶ್ಯ ಇಷ್ಟವಾಗುತ್ತದೆ ಎಂದು ಹೇಳಿದ್ದರು.

ಸಲಾರ್ ಸಿನಿಮಾದ ಕಥೆಗೆ  ಕಾಟೇರಮ್ಮ ಫೈಟ್ ಟ್ವಿಸ್ಟ್ ನೀಡುತ್ತದೆ. ಹೀಗಾಗಿ ಸೈಯದ್  ಫರ್ಜಾನಾ ಪಾತ್ರ ಹೈಲೈಟ್ಸ್ ಆಗಿದೆ. ಸಲಾರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತತ್ತಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಅಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments