Thursday, May 1, 2025
28.8 C
Bengaluru
LIVE
ಮನೆ#Exclusive NewsTop Newsವೈಟ್ ಟಾಪಿಂಗ್‌ಗೆ ಬಿಬಿಎಂಪಿ ಸಿದ್ಧತೆ- ಯಾವೆಲ್ಲಾ ರಸ್ತೆಗಳಲ್ಲಿ ಕಾಮಗಾರಿ?

ವೈಟ್ ಟಾಪಿಂಗ್‌ಗೆ ಬಿಬಿಎಂಪಿ ಸಿದ್ಧತೆ- ಯಾವೆಲ್ಲಾ ರಸ್ತೆಗಳಲ್ಲಿ ಕಾಮಗಾರಿ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಬಿಬಿಎಂಪಿ  ವೈಟ್ ಟಾಪಿಂಗ್ ಕಾಮಗಾರಿ ಮಾಡಲು ತಯಾರಿ ನಡೆಸುತ್ತಿದೆ. 15 ಪ್ಯಾಕೇಜ್‌ಗಳಲ್ಲಿ 43 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲು ಬ್ಲೂಪ್ರಿಂಟ್ ರೆಡಿ ಮಾಡಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈಗಾಗಲೇ ಎಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದು, ಭೂಮಿ ಪೂಜೆ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ವೈಟ್ ಟಾಪಿಂಗ್  ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಜಲಮಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಂಸ್ಥೆಯ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್ ಲೈನ್‌ಗಳ ಬದಲಾವಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಬೆಂಗಳೂರು ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯ, ರಾಜರಾಜೇಶ್ವರಿ ನಗರ ವಲಯ ಸೇರಿದಂತೆ ಇನ್ನೂ ಕೆಲವು ವಲಯದ 43 ರಸ್ತೆಗಳನ್ನು ಗುರುತು ಮಾಡಿದ್ದು, ವೈಟ್ ಟಾಪಿಂಗ್ ಮಾಡಲು ತಯಾರಿ ನಡೆದಿದೆ. ಈ ವರ್ಷ ಅಥವಾ ಮುಂದಿನ ವರ್ಷದ ಒಳಗೆ ಕಾಮಗಾರಿ ಮುಕ್ತಾಯ ಆಗಲಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments